ಯಲ್ಲಾಪುರ: ಸಮೀಪದ ಕನಕನಹಳ್ಳಿಯ ಲಕ್ಷ್ಮೀ ನರಸಿಂಹ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ ಗಾಂವ್ಕರ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿಜಯ ವಿನಾಯಕ ಯುವಕ ಸಂಘವು ತನ್ನ 28 ನೇ ವರುಷದ ಗಣೇಶೋತ್ಸವದ ನಿಮಿತ್ತ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಮೇರು ಕಲಾವಿದ , ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಗಣ್ಯರು ಬಿದ್ರೆಮನೆ ಭಾಸ್ಕರ ಗಾಂವ್ಕರ ಅವರನ್ನು ಗೌರವಿಸಿದರು. ಬಿದ್ರೆಮನೆ ಭಾಸ್ಕರ ಗಾಂವ್ಕರ ರವರನ್ನು ಹರಸಿ ಮಾತನಾಡಿದ ಚಿಟ್ಟಾಣಿ ಯವರು , ಬಾನೆತ್ತರಕೆ ಯಕ್ಷಗಾನದಲ್ಲಿ ಬೆಳೆಯಲಿ ಎಂದು ಮನತುಂಬಿ ಹಾರೈಸಿದರು.

RELATED ARTICLES  ಟೆಂಪೋ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ: ಸ್ಥಳದಲ್ಲಿಯೇ ಇಬ್ಬರ ದುರ್ಮರಣ

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಸ್ಕರ ಗಾಂವ್ಕರ ಬಿದ್ರೆಮನೆ, ಜೀವನಕ್ಕಾಗಿ ಪ್ರಯೋಗ ಮಾಡುತ್ತ ಮಾಡುತ್ತಾ ಬೆಳೆದೆ, ರಕ್ಷದಲ್ಲಿ ಬಂದ ಕಲೆ ಯಕ್ಷಗಾನ ಕೈ ಹಿಡಿಯಿತು, ಕಲೆಯ ಪಾತ್ರದಲ್ಲೇ ಅತ್ಯಂತ ಹೆಚ್ಚು ಸಮಾಧಾನ ಮತ್ತು ಖುಷಿಯನ್ನು ಪಡೆದಿದ್ದೇನೆ ಎಂದು ಹೇಳಿದರು.

ಅಭಿನಂದಿಸಿ ಮಾತನಾಡಿದ ಶಿವರಾಂ ಗಾಂವ್ಕರ ಕನಕನಹಳ್ಳಿ, ಭಾಸ್ಕರ ಗಾಂವ್ಕರ ರವರು ಜೀವನದಲ್ಲಿ ಅನೂಭವಿಸಿದ ಕಷ್ಟ-ಸುಖ, ನೋವು – ನಲಿವು ವಿಷದೀಕರಿಸಿದರಲ್ಲದೇ ಕಲಾವಿದನಿಗೆ ಪ್ರೇಕ್ಷರನ್ನು ಒಳ್ಳೆಯ ಭಾವನೆಯತ್ತ ಹಿಡಿದಿಟ್ಟ ಪುಣ್ಯವೂ ಲಭಿಸುತ್ತದೆ ಎಂದು ತಿಳಿಸಿದರು.

RELATED ARTICLES  ಓಮಿಕ್ರಾನ್ ಕೊರೋನಾ ರೂಪಾಂತರಿ ಹಿನ್ನೆಲೆ : ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲಾದ ನಾಗರಾಜ ನಾಯಕ, ಮಾತನಾಡಿ ಭಾಸ್ಕರ ಗಾಂವ್ಕರ ರವರ ಯಕ್ಷ ಸೇವೆಯನ್ನು ಸ್ಮರಿಸಿದರು.

ಪ್ರಶಾಂತ ಸಭಾಹಿತ ತಮ್ಮ ಹಿತಾಶಯಗಳನ್ನು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷ ಗೋಪಣ್ಣ ವೈದ್ಯ, ಬಿಡುವಿರದ ಕಾರ್ಯದೊತ್ತಡದ ನಡುವೆಯೂ ಭಾಸ್ಕರ ಗಾಂವ್ಕರ ರವರ ಕಲಾಸೇವೆಯನ್ನು ಕೊಂಡಾಡಿದರು.

ರಾಮಕೃಷ್ಣ ಹರಿಮನೆ ನಿರೂಪಿಸಿದರು. ಗಣೇಶ್ ಭಟ್ಟ ಸನ್ಮಾನ ಪತ್ರ ವಾಚಿಸಿದರು, ಪ್ರೇಮಕುಮಾರ್ ಹೆಗಡೆ ಸ್ವಾಗತಿಸಿ , ವಂದಿಸಿದರು. ನಂತರದಲ್ಲಿ ಛಲದಂಕ ಚಕ್ರೇಶ್ವರ ಯಕ್ಷಗಾನ ಪ್ರದರ್ಶನಗೊಂಡಿತು.