ಕುಮಟಾ : ತಾಲೂಕಿನ ಬಡಾಳದ ಮಂಕಿಬೈಲ್ ಬಳಿ ದಾಳಿ ನಡೆಸಿದ ಪೊಲೀಸರು ಮಹೇಂದ್ರ ಜೀತೊ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಮೂರು ಜಾನುವಾರಗಳನ್ನು ವಶಕ್ಕೆ ಪಡೆಯುವ ಜೊತೆಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಕುಮಟಾ ತಾಲೂಕಿನ ಬಡಾಳದ ಮಂಕಿಬೈಲ್ ಬಳಿ ಮಹೇಂದ್ರ ಜೀತೊ ಗೂಡ್ಸ್ ವಾಹನದಲ್ಲಿ ಮೂರು ಜಾನುವಾರಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದರ ಮೇಲೆ ದಾಳಿ ನಡೆಸಿದ ಕುಮಟಾ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

RELATED ARTICLES  ಭಟ್ಕಳದಲ್ಲಿ ಅಸರ್ಮಪಕ ರಸ್ತೆ ಕಾಮಗಾರಿ : ನಾಗರಿಕ ವೇದಿಕೆ ಘಟಕದಿಂದ ಆಕ್ರೋಶ

ಹಾವೇರಿಯ ಹಿರೇಕೆರೂರ ನಿವಾಸಿ ನೂರೂಲ್ಲಾ ಮೆಹಬೂಬ ಸಾಬ್, ಸಿದ್ದಾಪುರದ ದೊಡ್ಮನೆ ನಿವಾಸಿ ರಾಘವೇಂದ್ರ ಗಣಪತಿ ನಾಯ್ಕ, ಮತ್ತು ಬಡಾಳ ಸೊಪ್ಪಿನಹೊಸಳ್ಳಿಯ ಸುರೇಶ ಕೃಷ್ಣ ಗೌಡ ಬಂಧಿತ ಆರೋಪಿಗಳು.

RELATED ARTICLES  ಕನ್ಯಾಸಂಸ್ಕಾರ ದ ಕುರಿತು ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ

ಈ ಮೂವರು ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಮೂರು ಜಾನುವಾರಗಳನ್ನು ಮಹೇಂದ್ರ ಜೀತೊ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಿದ್ದಾಪುರ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

ಜಾನುವಾರಗಳನ್ನು ಹೊಸಾಡ ಗೋ ಶಾಲೆಗೆ ಕಳುಹಿಸಿಕೊಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.