ಕುಮಟಾ: ಒಂದೆಡೆ ಜನರಲ್ಲಿ ಜೀವಭಯ ಹುಟ್ಟಿಸಿರುವ ಕರೋನಾ, ತಾಲೂಕಿನಲ್ಲಿ ಎಡೆಬಿಡದೆ ಜನರನ್ನು ಕಾಡುತ್ತಿದೆ. ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇನ್ನೊಂದು ದಿನ ರುದ್ರಪ್ರತಾಪವನ್ನು ತೋರುತ್ತಿರುವ ಕೊರೋನಾ, ಅತಿ ಹೆಚ್ಚಿನ ಪ್ರಕರಣಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಜನತೆ ಅಗತ್ಯ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯೂ ಇದೆ.
ಇಂದು ತಾಲೂಕಿನಲ್ಲಿ 49 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಅರ್ಧ ಶತಕದ ಸನಿಹಕ್ಕೆ ಒಂದೇ ದಿನದ ಪ್ರಕರಣ ಬಂದು ತಲುಪಿದೆ. ಇದಲ್ಲದೆ ಇಂದು ಅನಾರೋಗ್ಯದಿoದ ಮೃತಪಟ್ಟ ದೀವಗಿ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಜನತೆಯನ್ನು ಇನ್ನಷ್ಟು ಭಯದ ಗೂಡಿಗೆ ತಳ್ಳಿದಂತಾಗಿದೆ.
ಹಿರೆಗುತ್ತಿಯ 30 ವರ್ಷದ ಪುರುಷ, 52 ವರ್ಷದ ಪುರುಷ, ಗೋಕರ್ಣದ ದೇವರಬಾವಿಯ 10 ವರ್ಷದ ಬಾಲಕ, ಬೆಟಗೇರಿಯ 50 ವರ್ಷದ ಮಹಿಳೆ, ವಿವೇಕ ನಗರದ 66 ವರ್ಷದ ವೃದ್ದ, ಕತಗಾಲದ ಹೆಬೈಲ್‌ನ 36 ವರ್ಷದ ಪುರುಷ, ವನ್ನಳ್ಳಿಯ 31 ವರ್ಷದ ಪುರುಷ, ಸಿದ್ದನಬಾವಿಯ 57 ವರ್ಷದ ಪುರುಷ, 22 ವರ್ಷದ ಯುವಕ,ಹೊಲನಗದ್ದೆಯ 52 ವರ್ಷದ ಪುರುಷ, ಬಾಡದ 62 ವರ್ಷದ ವೃದ್ದೆ, 35 ವರ್ಷದ ಪುರುಷ, 67 ವರ್ಷದ ವೃದ್ದ, ಕೊಡ್ಕಣಿಯ 32 ವರ್ಷದ ಪುರುಷ, ಗೋಕರ್ಣದ 45 ವರ್ಷದ ಪುರುಷ, ಹಳಕಾರದ ಮದ್ಗುಣಿ 48 ವರ್ಷದ ಮಹಿಳೆ, ಹನೆಹಳ್ಳಿಯ 62 ವರ್ಷದ ವೃದ್ದೆ, 62 ವರ್ಷದ ವೃದ್ದ, ಹೆರವಟ್ಟಾದ 80 ವರ್ಷದ ವೃದ್ದ, 70 ವರ್ಷದ ವೃದ್ದೆ, 9 ವರ್ಷದ ಬಾಲಕಿ, 45 ಪುರುಷ, 30 ವರ್ಷದ ಮಹಿಳೆ, ಬಗ್ಗೋಣದ 40 ವರ್ಷದ ಪುರುಷ, ಕುಮಟಾ ಹೆಗಡೆಯ 75 ವರ್ಷದ ವೃದ್ದ, ಬಸ್ತಿಪೇಟೆಯ 53 ವರ್ಷದ ಪುರುಷ, 64 ವರ್ಷದ ವೃದ್ಧೆ,ದೇವಗುಂಡಿಯ 50 ವರ್ಷದ ಪುರುಷ, ದೇವರಹಕ್ಕಲದ 46 ವರ್ಷದ ಪುರುಷ, ಕೊಪ್ಪಳಕರವಾಡಿಯ 26 ವರ್ಷದ ಯುವತಿ, ಚಿತ್ರಿಗಿಯ 65 ವರ್ಷದ ವೃದ್ದ, 55 ವರ್ಷದ ಮಹಿಳೆ, ಗುಡ್‌ಕಾಗಲ್‌ನ 44 ವರ್ಷದ ಪುರುಷ, ಕಾಗಲ್ ಹಿಣಿಯ 49 ವರ್ಷದ ಮಹಿಳೆ, ಉಪ್ಪಾರಕೇರಿಯ 46 ವರ್ಷದ ಪುರುಷ, ಕಲ್ಲಬ್ಬೆಯ 19 ವರ್ಷದ ಯುವತಿ, ಮಿರ್ಜಾನದ 46 ವರ್ಷದ ಮಹಿಳೆ, ಮಾಸೂರಿನ 47 ವರ್ಷದ ಮಹಿಳೆ,ಕುಮಟಾ ಪಟ್ಟಣದ 46 ವರ್ಷದ ಪುರುಷ, 40 ವರ್ಷದ ಪುರುಷ, 48 ವರ್ಷದ ಮಹಿಳೆ, 50 ವರ್ಷದ ಪುರುಷ, 19 ವರ್ಷದ ಯುವಕ, 15 ವರ್ಷದ ಬಾಲಕ, 52 ವರ್ಷದ ಮಹಿಳೆ, 24 ವರ್ಷದ ಯುವತಿ, 52 ವರ್ಷದ ಮಹಿಳೆ, 80 ವರ್ಷದ ವೃದ್ಧ, 75 ವರ್ಷದ ವೃದ್ಧೆಗೆ ಕೊರೋನಾ ಪಾಸಿಟಿವ್ ಬಂದಿದೆ.
ತಾಲೂಕಿನ ಹೆಬೈಲ್, ವನ್ನಳ್ಳಿ, ಸಿದ್ದನಬಾವಿ ಹೊಲನಗದ್ದೆ, ಬಾಡಾ, ಕೊಡ್ಕಣಿ, ಮದ್ಗುಣಿ, ಹನೆಹಳ್ಳಿ, ಹೆರವಟ್ಟಾ, ಬಗ್ಗೋಣ, ಹೆಗಡೆ, ಬಸ್ತಿಪೇಟೆ, ದೇವಗುಂಡಿ, ದೇವರಹಕ್ಕಲ, ಕೊಪ್ಪಳಕರವಾಡಿ, ಚಿತ್ರಿಗಿ, ಗುಡ್‌ಕಾಗಲ್, ಕಲ್ಲಬ್ಬೆ, ಮಿರ್ಜಾನ್, ಹಿರೇಗುತ್ತಿ, ಗೋಕರ್ಣ, ಬೆಟಗೇರಿ, ವಿವೇಕ ನಗರ, ಮಾಸೂರು, ಸೇರಿದಂತೆ ತಾಲೂಕಿನ ಮೂಲೆ ಮೂಲೆಗಳಲ್ಲಿ ಕೊರೋನಾ ಆರ್ಭಟ ಜೋರಾಗಿದೆ.
ನಮ್ಮ ಕಳಕಳಿ : ಸಾರ್ವಜನಿಕರೇ ಎಂತಹುದೇ ಸಂದರ್ಭದಲ್ಲಿಯೂ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.