ಹೊನ್ನಾವರ ತಾಲೂಕಿನಲ್ಲಿ ಇಂದು 11 ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಗಾಂಧಿನಗರದ 57 ವರ್ಷದ ಪುರುಷ, ಕೆಳಗಿನಪಾಳ್ಯದ 38 ವರ್ಷದ ಪುರುಷ, ಕೆ.ಎಚ್.ಬಿ.ಕಾಲೂನಿಯ 48 ವರ್ಷದ ಪುರುಷ, ಗ್ರಾಮೀಣ ಭಾಗವಾದ ಖರ್ವಾದ 61 ವರ್ಷದ ಪುರುಷ, ಬಳಕೂರಿನ 32 ವರ್ಷದ ಮಹಿಳೆ, ಸಾಲ್ಕೋಡ್ ದ 25 ವರ್ಷದ ಪುರುಷ, ಸಂಶಿಯ 30 ವರ್ಷದ ಯುವಕ, ಚಂದಾವರದ 50 ವರ್ಷದ ಪುರುಷ, ಮಂಕಿ ಕೊಪ್ಪದಮಕ್ಕಿ 60 ವರ್ಷದ ಮಹಿಳೆ, 42 ವರ್ಷದ ಪುರುಷ ಹಾಗೂ 38 ವರ್ಷದ ಪುರುಷನಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಹೊನ್ನಾವರ ಪಟ್ಟಣದಲ್ಲಿ -3, ಕೋಪ್ಪದಮಕ್ಕಿಯಲ್ಲಿ 3, ಗಾಂಧಿನಗರ , ಕೆಳಗಿನಪಾಳ್ಯ, ಕೆಎಚ್‌ಬಿ ಕಾಲೋನಿಯಲ್ಲಿ ಮಂಕಿ ಖರ್ವಾ- ಬಳ್ಕೂರ- ಸಾಲಕೋಡ- ಚಂದಾವರದಲ್ಲಿ ತಲಾ ಒಂದೊoದು ಪ್ರಕರಣ ಪತ್ತೆಯಾಗಿದೆ.
ಯಲ್ಲಾಪುರದಲ್ಲಿ ರವಿವಾರ 13 ಜನರಲ್ಲಿ ಕೊರೊನಾ ಸೋಂಕು ಪತ್ತೆ
ಯಲ್ಲಾಪುರ ತಾಲೂಕಿನಲ್ಲಿ ರವಿವಾರ 13 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು 298 ಜನರ ಗಂಟಲು ದೃವದ ಪರೀಕ್ಷೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೈಲಂದೂರು ಗೌಳಿವಾಡದಲ್ಲಿ 9, ಸಹಸ್ರಳ್ಳಿ, ಕಾಳಮ್ಮನಗರ, ಇಡಗುಂದಿ, ಗೋಪಾಲಕೃಷ್ಣ ಗಲ್ಲಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.