ಕುಮಟಾ : ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಛಾಯಾ ಭಟ್ ಪಡೆದುಕೊಂಡಿದ್ದಾರೆ. ಇವರು ಮೂಲತಃ ಕುಮಟಾ ತಾಲೂಕಿನ ಹೊಲನಗದ್ದೆ ಊರಿನವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ಬೆಂಗಳೂರಿನ ಶ್ರೀ ಕುಮರನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷವೂ ಇವರ ಹಸ್ತಪ್ರತಿ
ಕೊನೆಯ ಸುತ್ತಿಗೆ ಹೋಗಿತ್ತು. ಈ ಬಾರಿ ಅವರು ಕೇವಲ ಹಳೆಯ ಕತೆಗಳನ್ನು ಮಾತ್ರ ಸ್ಪರ್ಧೆಗೆ ಕಳುಹಿಸದೆ, ಮತ್ತಷ್ಟು ಹೊಸಕತೆಗಳನ್ನು ಬರೆದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

RELATED ARTICLES  ಸ್ಕೂಟಿ ಹಾಗೂ ಮಿನಿ ಟ್ರಕ್ ನಡುವೆ ಅಪಘಾತ

ಬಹುಮಾನವು ಮೂವತ್ತು ಸಾವಿರ ರೂಪಾಯಿ ನಗದು ಫಲಕ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಡಾಟರ್ಸ ಡೇ ದಿನವೇ ಈ ಬಹುಮಾನ ಬಂದಿದ್ದು ಈಕೆಯ ಸಾಧನೆಗೆ ತಂದೆ ಆರ್.ಎನ್ ಹೆಗಡೆ ಹಾಗೂ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES  " ಏ" ಶ್ರೇಣಿಗೆ ಏರಿತು ಬಾಡ ಶ್ರೀ ಕಾಂಚಿಕಾಂಬಾ ದೇವಸ್ಥಾನ: ಭಕ್ತರಲ್ಲಿ ಮೂಡಿತು ಹರುಷ.

ಪುಸ್ತಕವು ಮುಂದಿನ ತಿಂಗಳಲ್ಲಿ ಓದುಗರಿಗೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಕೊರೋನಾ ಕಾರಣದಿಂದ ಕಾರ್ಯಕ್ರಮ ಏರ್ಪಡಿಸುವುದು ಕಷ್ಟ. ಆದ್ದರಿಂದ ಡಿಜಿಟಲ್ ಮೂಲಕವೇ ಪುಸ್ತಕ ಬಿಡುಗಡೆ ಮಾಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.