ಕುಮಟಾ: ಎಡಬಿಡದೆ ಕಾಡುತ್ತಿರುವ ಕೊರೋನಾ ಇಂದೂ ಕೂಡಾ ತಾಲೂಕಿನಲ್ಲಿ ತನ್ನ ಪ್ರಾಭಲ್ಯ ತೋರಿದೆ. ತಾಲೂಕಿನ ನಾಗೂರ್, ಕಲಭಾಗ, ಗುಡೆಅಂಗಡಿ, ಭಸ್ತಿಪೇಟೆ, ಕೊಡ್ಕಣಿ, ತಲಗೋಡ್, ಹಿಣಿ, ಹೆಗಡೆ, ಹೆರವಟ್ಟಾ, ಅಳ್ವೇಕೊಡಿ, ಉಪ್ಪಿನಗಣಪತಿ, ವಿವೇಕನಗರ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದ್ದು ಇಂದು ಒಟ್ಟು 23 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಕಲಭಾಗದ 30 ವರ್ಷದ ಪುರುಷ, 65 ವರ್ಷದ ಪುರುಷ, ಮೂರಕಟ್ಟೆಯ 31 ವರ್ಷದ ಪುರುಷ, ಹೆರವಟ್ಟಾದ 30 ವರ್ಷದ ಪುರುಷ, ಮಾಸೂರಿನ 77 ವರ್ಷದ ವೃದ್ಧೆ, ಅಳ್ವೇಕೊಡಿಯ 40 ವರ್ಷದ ಪುರುಷ, ಕುಮಟಾದ 19 ವರ್ಷದ ಯುವತಿ, 47 ವರ್ಷದ ಪುರುಷ, ಹೆಗಡೆಯ 30 ವರ್ಷದ ಪುರುಷ, ಉಪ್ಪಿನಗಣಪತಿಯ 75 ವರ್ಷದ ವೃದ್ಧೆ, ಕೊಡ್ಕಣಿಯ 23 ವರ್ಷದ ಮಹಿಳೆ, ಹಿಣಿಯ 10 ವರ್ಷದ ಬಾಲಕ, ತಲಗೋಡ್‌ನ 24 ವರ್ಷದ ಯುವತಿ, ಭಸ್ತಿಪೇಟೆಯ 74 ವರ್ಷದ ವೃದ್ಧೆ, ಮಿರ್ಜಾನ್‌ನ 22 ವರ್ಷದ ಯುವತಿ, ವಿವೇಕನಗರದ 37 ವರ್ಷದ ಪುರುಷ, ಮೂರೂರ್ ರೋಡ್ ಸಮೀಪದ 17 ವರ್ಷದ ಯುವಕ, ಹೆಬೈಲ್‌ನ 13 ವರ್ಷದ ಬಾಲಕಿ, ಗುಡೆಅಂಗಡಿಯ 37 ವರ್ಷದ ಪುರುಷ, ನಾಗೂರ್‌ನ 55 ವರ್ಷದ ಮಹಿಳೆ, 64 ವರ್ಷದ ಪುರುಷ, 34 ವರ್ಷದ ಪುರುಷ, 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.