ಹೊನ್ನಾವರ ತಾಲೂಕಿನ ಪಟ್ಟಣದ 82 ವರ್ಷದ ಮಹಿಳೆ, ಕೆಳಗಿನಪಾಳ್ಯದ 54 ವರ್ಷದ ಪುರುಷ, ಸಿಡಿಪಿಐ ಇಲಾಖೆಯ 35 ವರ್ಷದ ಮಹಿಳೆ, ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 45 ವರ್ಷದ ಮಹಿಳೆ,ಕಡತೋಕಾದ 45 ವರ್ಷದ ಪುರುಷ ಹಾಗೂ ಕುಮಟಾದ 53 ವರ್ಷದ ಪುರುಷ ಹೊನ್ನಾವರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೊರೋನಾ ಪಾಸಿಟೀವ್ ಬಂದಿದ್ದು ಒಟ್ಟು
ಇಂದು 6 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಆರು ಕೇಸ್ ಗಳ ಪೈಕಿ ನಾಲ್ಕು ಕೇಸ್ ಪಟ್ಟಣ ವ್ಯಾಪ್ತಿಯಲ್ಲೇ ಕಾಣಿಸಿಕೊಂಡು ಉಳಿದವು ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿದೆ.

ಯಲ್ಲಾಪುರದಲ್ಲಿ ಸಾಮೂಹಿಕ ವಾಂತಿಬೇಧಿ

ಯಲ್ಲಾಪುರದ ಕರೇವನಗುಂಡಿಯಲ್ಲಿ
ಸಾಮೂಹಿಕ ವಾಂತಿಬೇಧಿ ಹಾಗೂ ಜ್ವರದಿಂದಾಗಿ 15 ಜನ ಆಸ್ಪತ್ರೆಗೆ ದಾಖಲಾಗಿದ್ದು .ಯಲ್ಲಾಪುರ ತಾಲೂಕಿನ ಮದನೂರು ಪಂಚಾಯಿತಿ ವ್ಯಾಪ್ತಿಯ ಕರೇವನಗುಂಡಿ ಗ್ರಾಮದಲ್ಲಿ ಸಾಮೂಹಿಕವಾಗಿ ವಾಂತಿ, ಭೇದಿ
ಹಾಗೂ ಜ್ವರದ ಲಕ್ಷಣಗಳು ಕಂಡು ಬಂದಿದ್ದು,
ತೀವ್ರವಾಗಿ ಬಳಲುತ್ತಿದ್ದ 15 ಜನರನ್ನು ಕರವತ್ತಿಯಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ನೇಣಿಗೆ ಶರಣಾದ ಪ್ರೇಮಿಗಳು : ಶಿರಸಿಯಲ್ಲಿ ನಡೆಯಿತು ದುರ್ಘಟನೆ

ಕಳೆದ ಎರಡು ಮೂರು ದಿನಗಳಿಂದ
ವಾಂತಿ ಬೇದಿ ಹಾಗೂ ಜ್ವರದ ರೀತಿಯ ರೋಗ ಲಕ್ಷಣ ಕಾಣಿಸಿಕೊಂಡಿದ್ದು ಇದೀಗ ಜನತೆ ಇದರಿಂದ ಕಂಗಾಲಾಗಿದ್ದಾರೆ. ಕೊರೋನಾ ನಡುವೆ ಇದು ಜನತೆಯ ಭಯಕ್ಕೆ ಕಾರಣವಾಗಿದೆ.

ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು
ತಾಲ್ಲೂಕು ಆಸ್ಪತ್ರೆಗೆ ವ್ಯಾಪಾರಿಗಳ ಮುತ್ತಿಗೆ.

ಯಲ್ಲಾಪುರ ತಹಶೀಲ್ದಾರ ಗಣಪತಿ
ಶಾಸ್ತಿಯವರ ಖಡಕ್ ಎಚ್ಚರಿಕೆಯ ಕಾರಣಕ್ಕಾಗಿ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಹಲವಾರು ವ್ಯಾಪಾರಿಗಳು ಸೋಮವಾರ ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು ತಾಲ್ಲೂಕು ಆಸ್ಪತ್ರೆಯಲ್ಲಿ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

RELATED ARTICLES  ಸ್ಮಾರ್ಟ್ ಸಿಟಿ ಗಿಂತ ಸ್ಮಾರ್ಟ್ ಹಳ್ಳಿಗಳಿಗೆ ಪ್ರಾಮುಖ್ಯತೆ : ಶಿವರಾಮ ಹೆಬ್ಬಾರ

ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಶನಿವಾರ ಕೊವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಅಲ್ಲಿಗೆ ಭೇಟಿ ನೀಡಿದ್ದ ತಹಸೀಲ್ದಾರ ಗಣಪತಿ ಶಾಸ್ತ್ರಿ ಪ್ರತೀ ಅಂಗಡಿಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳನ್ನು ಕಳುಹಿಸಿ ವ್ಯಾಪಾರಿಗಳು ಅವರ ಸಹಾಯಕರನ್ನು ಪರೀಕ್ಷೆಗೆ ಒಳಪಡುವಂತೆ ವಿನಂತಿಸಿದ್ದರು.


ವ್ಯಾಪಾರಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಒಳಗಾಗದೆ ವ್ಯಾಪಾರ ನಡೆಸುವ ಅಂಗಡಿ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳಲಾಗುವುದು ಹಾಗೂ ಅಂಗಡಿಯನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಈ ಎಚ್ಚರಿಕೆಯಿಂದಾಗಿ ಸೋಮವಾರ ತಾಲ್ಲೂಕು ಆಸ್ಪತ್ರೆಯಲ್ಲಿ ವ್ಯಾಪಾರಸ್ಥರು ಹಾಗೂ ಹಾಗೂ ಅವರ ಸಹಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಕೊವಿಡ್ ಪರೀಕ್ಷೆ
ಮಾಡಿಸಿಕೊಳ್ಳಲು ಆಗಮಿಸಿರುವುದು ಕಂಡು ಬಂದಿದೆ.

ಇದನ್ನೂ ಓದಿ.

ಕುಮಟಾದಲ್ಲಿ ನಿಲ್ಲದ ಕೊರೋನಾ ಆರ್ಭಟ