ಕರ್ಕಿ: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ಹಾಗೂ ಸ್ನೇಹಕುಂಜ ಟ್ರಸ್ಟ ಹೊನ್ನಾವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಕೊರೊನಾ ವೈರಸ್ ಜಾಗೃತಿ ಕಾರ್ಯಕ್ರಮ ಹಾಗೂ ಕುಟುಂಬ ಯೋಜನಾ ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡುವದರೊಂದಿಗೆ ನಿರೋಧ ಮತ್ತು ನುಂಗುವ ಮಾತ್ರೆ, ಉಚಿತ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕೊರೊನಾ ವೈರಸ್‍ನ ಲಕ್ಷಣ ಮತ್ತು ತಡೆಗಟ್ಟುವ ಕ್ರಮ ಹಾಗೂ ಓರಲ್ ಪಿಲ್ಸ್ ತೆಗೆದುಕೊಳ್ಳುವ ಕ್ರಮದ ಕುರಿತಾಗಿ ಈ ಕಾರ್ಯಕ್ರಮದ ಅತಿಥಿ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್‍ನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಮಾಹಿತಿ ನೀಡಿದರು.
ಈ ಶಿಬಿರದ ಅಧ್ಯಕ್ಷತೆ ವಹಿಸಿದ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಮ್ಯಾನೇಜರ್ ಆದ ಶ್ರೀಮತಿ ಸಂತಾನ್ ಲೂಯಿಸ್ ಕುಟುಂಬ ಯೋಜನಾ ನಿಯಂತ್ರಣಾ ವಿಧಾನಗಳಾದ ಶಾಶ್ವತ & ತಾತ್ಕಾಲಿಕ ಹಾಗೂ ನಿರೋಧ್ ಉಪಯೋಗಿಸುವ ವಿಧಾನವನ್ನು ಪ್ರದರ್ಶನ ಮಾಡಿದರು.
ಈ ಶಿಬಿರಕ್ಕೆ ಬಂದಂತಹ ಮಹಿಳೆಯರಿಗೆ ಉಚಿತವಾಗಿ ನಿರೋಧ ಮತ್ತು ಓರಲ್ ಪಿಲ್ಸ್ ವಿತರಣೆಯನ್ನು ಈ ಶಿಬಿರದ ಸಂಪನ್ಮೂಲ ವ್ಯಕ್ತಿ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್‍ನ ವೈದ್ಯಾಧಿಕಾರಿಯಾದಂತಹ ಡಾ|| ಸನ್ಮತಿ ಹೆಗಡೆ ಮಾಡಿದರು.
ಸ್ನೇಹಕುಂಜ ಟ್ರಸ್ಟ ಹೊನ್ನಾವರದ ಸೋಶಿಯಲ್ ವರ್ಕರ್ ಆದಂತಹ ಶ್ರೀಮತಿ ಚಂದ್ರಕಲಾ ರವರು ಸ್ವಾಗತಿಸುವದರೊಂದಿಗೆ ಸ್ನೇಹಕುಂಜ ಟ್ರಸ್ಟನ ಸೌಲಭ್ಯದ ಕುರಿತಾಗಿ ಮಾಹಿತಿ ನೀಡಿದರು.
ತಾಲೂಕಾ ಪಂಚಾಯತ್ ತೊಪ್ಪಲಕೇರಿಯ ಸದಸ್ಯರಾದಂತಹ ಶ್ರೀಮತಿ ಸಾಧನಾ ನಾಯ್ಕ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್‍ನ ನರ್ಸ ಆದಂತಹ ಶ್ರೀಮತಿ ಶಾಲಿನಿ ನಾಯ್ಕ ಸಹಕರಿಸಿದರು.