ಯಲ್ಲಾಪುರ: ಪಟ್ಟಣದ ತರಕಾರಿ ಮಾರುಕಟ್ಟೆ ರಸ್ತೆಯ ಪಕ್ಕ ಇರುವ ಸಾಹಿತ್ಯ ಭವನದ ಕಟ್ಟಡ ದ ಸುತ್ತಲೂ ಇರುವ ಕೆಲವು ಜಾಗೆ ಅತಿಕ್ರಮಣ ವಾಗಿರುತ್ತಿದ್ದು,ಈ ಜಾಗದ ಗಡಿಯನ್ನು ಗುರುತಿಸಿ ಕೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಸಚಿವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದ ಕುರಿತು ತಾಲೂಕಾ ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಂಗಳವಾರ ಮಾಹಿತಿ ನೀಡಿ, ಪಟ್ಟಣದ ಸರ್ವೆ ನಂ. 4ಅ1ಅ ಕ್ಷೇತ್ರ 0-2-4ನೇ ಜಮೀನು ಕಸಾಪಕ್ಕೆ ಮಂಜೂರಾಗಿ ಅಲ್ಲಿ ಕಸಾಪ ಸಾಹಿತ್ಯಭವನ ನಿರ್ಮಿಸಿಕೊಂಡಿದೆ. ಈ ಪ್ರದೇಶದಲ್ಲಿ ಕೆಲವು ಭಾಗ ಅತಿಕ್ರಮಣ ಆಗಿರುವ ಬಗ್ಗೆ ತಾಲೂಕಾಧ್ಯಕ್ಷರು ಸಚಿವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳುವಂತೆ ಸಚಿವ ದೇಶಪಾಂಡೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದಾರೆ.
ಅದರಂತೆ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಸಚಿವ ಎಸ್. ಕೆ. ಪಾಟೀಲ್ ಅವರು ಪಟ್ಟಣದ ಕನ್ನಡ ಸಾಹಿತ್ಯ ಭವನ ಜಾಗದ ಸರ್ವೆ ನೆಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಪತ್ರಿಕಾಗೋಷ್ಠಿ ನೆಡೆಸಿ, ಅನೇಕ ಬಾರಿ ಮನವಿ ಕೊಟ್ಟರೂ ಸಹ ತಾಲೂಕಾ ಆಡಳಿತ ಕ್ರಮ ಕೈಗೊಂಡಿರಲಿಲ್ಲ. ಕೂಡಲೇ ಸರ್ವೆ ಮಾಡದಿದ್ದರೆ ತಾಲೂಕಾ ಆಡಳಿತದ ವಿರುದ್ದ ಧರಣಿ ನೆಡೆಸುವುದಾಗಿ ಎಚ್ಚರಿಸಿದ್ದರು.
.