ಯಲ್ಲಾಪುರ: ಗ್ಯಾಸ್ ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ, ಮಗಳು ಸ್ಥಳದಲ್ಲೆ ಮೃತಪಟ್ಟ ಘಟನೆ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

ಯಲ್ಲಾಪುರದ ಅಗ್ನಿ ಶಾಮಕ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನೋದ ಕಿಂದಳಕರ್ ಹಾಗೂ ಅವರ ಪುತ್ರಿ ಸುನೇಹಾ ಕಿಂದಳಕರ್ ಅಪಘಾತದಲ್ಲಿ ಮೃತಪಟ್ಟವರು ಎನ್ನಲಾಗಿದೆ.

RELATED ARTICLES  ಕೃಷ್ಣಾಷ್ಟಮೀ ಪೂಜೆ ಹಾಗೂ ದೇವರ ತೊಟ್ಟಿಲು ಮಹೋತ್ಸವದ.

ವಿನೋದ ಅವರು ಮಗಳನ್ನು ಕರೆದುಕೊಂಡು ತಮ್ಮ ಊರಾದ ಅಂಕೋಲಾಕ್ಕೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ತಂದೆ ವಿನೋದ ಹಾಗೂ ಮಗಳು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ‌

RELATED ARTICLES  ಮಹಿಳೆ ಮತ್ತು ಮಕ್ಕಳ ಗ್ರಾಮ ಸಭೆ.

ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.