ಕುಮಟಾ : ತಾಲೂಕಿನಲ್ಲಿ ಕೊರೋನಾ ಸೋಂಕು ಮಿತಿ ಮೀರಿದ ರೀತಿಯಲ್ಲಿ ತನ್ನ ಪ್ರತಾಪ ತೋರುತ್ತಿದೆ. ಪಟ್ಟಣದಲ್ಲಿ ಅಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಮಹಾಮಾರಿಯ ಸೋಂಕು ಆವರಿಸುತ್ತಿದೆ.

ಕಳೆದ ಒಂದು ವಾರದಿಂದ ಅತಿಯಾಗಿ ಕಾಣಿಸಿಕೊಳ್ಳುತ್ತಿರುವ ಕರೋನಾ ಸೋಂಕು ಇಂದು ಕೂಡ ಅರ್ಧಶತಕದ ಸನಿಹದ ವರೆಗೆ ತಲುಪಿದೆ. ಮಾಸೂರ್ ಕ್ರಾಸ್ 49 ವರ್ಷದ ಮಹಿಳೆ, 30 ವರ್ಷದ ಪುರುಷ, ಮಿರ್ಜಾನ್‌ನ 36 ವರ್ಷದ ಪುರುಷ, ಖಂಡಗಾರ್‌ನ 32 ವರ್ಷದ ಪುರುಷ, 32 ವರ್ಷದ ಮಹಿಳೆ, 2 ವರ್ಷದ ಮಗು, ಹಿರೇಗುತ್ತಿಯ 55 ವರ್ಷದ ಮಹಿಳೆ, ಗುಡೆಅಂಗಡಿಯ 11 ವರ್ಷದ ಬಾಲಕ, 45 ವರ್ಷದ ಪುರುಷ, ಕಲ್ಕೇರಿಯ 65 ವರ್ಷದ ಪುರುಷ, 60 ವರ್ಷದ ಮಹಿಳೆ, ಕಲಬಾಗ್‌ನ 33 ವರ್ಷದ ಪುರುಷ, ಗಾಂಧಿನಗರದ 47 ವರ್ಷದ ಪುರುಷ,ಬಗ್ಗೋಣದ 52 ವರ್ಷದ ಮಹಿಳೆ, 32 ವರ್ಷದ ಮಹಿಳೆ, ಅಳ್ವೇಕೊಡಿಯ 64 ವರ್ಷದ ಮಹಿಳೆ, ಹನೇಹಳ್ಳಿಯ 36 ವರ್ಷದ ಮಹಿಳೆ, ಮೂರೂರಿನ 27 ವರ್ಷದ ಯುವತಿ, ಹೆಗಡೆಯ 53 ವರ್ಷದ ಪುರುಷ, 57 ವರ್ಷದ ಪುರುಷ, 53 ವರ್ಷದ ಮಹಿಳೆ, 58 ವರ್ಷದ ಪುರುಷ, ಕೊಪ್ಪಳಕರವಾಡಿಯ 50 ವರ್ಷದ ಮಹಿಳೆ, 58 ವರ್ಷದ ಪುರುಷ, ಕೂಜಳ್ಳಿಯ 39 ವರ್ಷದ ಪುರುಷ,ಹಂದಿಗೋಣದ 70 ವರ್ಷದ ವೃದ್ಧ, ಕುಮಟಾದ 53 ವರ್ಷದ ಪುರುಷ, 41 ವರ್ಷದ ಪುರುಷ, 71 ವರ್ಷದ ವೃದ್ಧ, 65 ವರ್ಷದ ಮಹಿಳೆ, 17 ವರ್ಷದ ಯುವಕ, 47 ವರ್ಷದ ಮಹಿಳೆ, 33 ವರ್ಷದ ಮಹಿಳೆ, 3 ವರ್ಷದ ಮಗು, 7 ವರ್ಷದ ಬಾಲಕ, 43 ವರ್ಷದ ಪುರುಷ, 40 ವರ್ಷದ ಪುರುಷ, 35 ವರ್ಷದ ಮಹಿಳೆ, 58 ವರ್ಷದ ಮಹಿಳೆ,ಮಾಸೂರಿನ 59 ವರ್ಷದ ಮಹಿಳೆ, ಕಲ್ಲಬ್ಬೆಯ 52 ವರ್ಷದ ಮಹಿಳೆ, ತಾರೆಮಕ್ಕಿಯ 26 ವರ್ಷದ ಯುವಕ, ಬಂಗ್ಲೆಗುಡ್ಡದ 41 ವರ್ಷದ ಮಹಿಳೆ, ದಿವಗಿಯ 39 ವರ್ಷದ ಪುರುಷ, 54 ವರ್ಷದ ಮಹಿಳೆ, 34 ವರ್ಷದ ಪುರುಷ, 33 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ತನ್ನ ಅಸ್ತಿತ್ವ ತೋರ್ಪಡಿಸಿದೆ.

RELATED ARTICLES  ಚರಂಡಿಗೆ ಬಿದ್ದ ಹಸುವಿನ ರಕ್ಷಣೆ

ತಾಲೂಕಿನಾದ್ಯಂತ ಇಂದು ಬರೋಬ್ಬರಿ 47 ಕರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದ್ದು ಹಿರೇಗುತ್ತಿ, ಕೊಪ್ಪಳಕರವಾಡಿ, ಮೂರೂರ್, ಹನೇಹಳ್ಳಿ, ಅಳ್ವೇಕೋಡಿ, ಮಿರ್ಜಾನ್, ಕೂಜಳ್ಳಿ,ದಿವಗಿ, ಹೆಗಡೆ, ಖಂಡಗಾರ್, ಬಗ್ಗೋಣ, ಮಾಸೂರ್ ಕ್ರಾಸ್ ಸೇರಿದಂತೆ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು ಜನತೆ ತೀವ್ರ ಕಾಳಜಿ ವಹಿಸುವ ಅಗತ್ಯತೆ ಇದೆ.

RELATED ARTICLES  ಭಟ್ಕಳದಲ್ಲಿ ಮಳೆಯ ಅಬ್ಬರ: ಮನೆಯ ಮೇಲೆ ಎರಗಿದವು ಮರಗಳು!