ಭಟ್ಕಳ : ಜನ ಎಷ್ಟೆಲ್ಲಾ ಬುದ್ದಿವಂತಿಕೆ ಪ್ರಯೋಗ ಮಾಡುವುದರ ಮೂಲಕ ಎಲ್ಲ ವಿಧದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದಕ್ಕೆ ಇನ್ನೊಂದು ನಿದರ್ಶನ ಇದೆ.
ಕರೋನಾದ ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಅರಬ್ ರಾಷ್ಟ್ರಗಳಿಂದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಧಿಸಲು ಬಳಸಿಕೊಂಡಿರುವ ಭೂಪನೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕರ್ನಾಟಕದ ಉತ್ತರ ಕನ್ನಡದ ಭಟ್ಕಳ ಮೂಲದ ಅಮರ್ ಎನ್ನುವಾತ ಮಾಸ್ಕ್ ನೊಳಗೆ ಸುಮಾರು 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನವನ್ನು ಅಕ್ರಮವಾಗಿ ಕೊಂಡೊಯ್ಯಲು ಪ್ರಯತ್ನಿಸಿದ ಘಟನೆ ಕರಿಪುರಂ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಯುಎಇ ಇಂದ ಬಂದು ಈತ ವಿಮಾನದಿಂದ ಇಳಿದಾಗ ಈ ವಿವರ ಬಯಲಾಗಿದೆ.
ಕರಿಪುರಂನಲ್ಲಿ ಇದೇ ಮೊದಲ ಬಾರಿಗೆ ಮಾಸ್ಕ್ ನಲ್ಲಿ ಚಿನ್ನವನ್ನಿಟ್ಟುಕೊಂಡು ಸಾಗಿಸಲು ಯತ್ನಿಸಿದ್ದು, ಕೋಝಿಕೋಡೆ ಏರ್ ಇಂಟಲಿಜೆನ್ಸಿ,ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವ್ಯಕ್ತಿಯ ದೇಹದೊಳಗೆ ವಸ್ತುಗಳನ್ನು ಇಟ್ಟುಕೊಂಡು ಸಾಧಿಸಲು ಪ್ರಯತ್ನಿಸುತ್ತಿದ್ದ ಪ್ರಕರಣಗಳು ನಡೆದಿದ್ದರೂ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಡ್ಡಾಯವಾಗಿ ಧರಿಸಬೇಕಾದ ಮಾಸ್ಕ್ ನಲ್ಲಿಯೂ ಅಕ್ರಮ ನಡೆಸಲು ಪ್ರಯತ್ನಿಸುತ್ತಿರುವ ವಿಷಯ ಇದೀಗ ಬಯಲಾಗಿದೆ.