ಕುಮಟಾ: ಗೋಕರ್ಣದ 84 ವರ್ಷದ ವೃದ್ಧೆ, 36 ವರ್ಷದ ಪುರುಷ, ಕಲ್ಲಬ್ಬೆಯ 63 ವರ್ಷದ ಮಹಿಳೆ, ಬಂಕಿಕೋಡ್ಲಾದ 38 ವರ್ಷದ ಮಹಿಳೆ, 4 ವರ್ಷದ ಮಗು, ಮಾಸೂರಿನ 25 ವರ್ಷದ ಯುವತಿ, 61 ವರ್ಷದ ಪುರುಷ, ಹೆಗಡೆಯ 27 ವರ್ಷದ ಯುವತಿ, 55 ವರ್ಷದ ಮಹಿಳೆ, ಗಾಂಧಿನಗರದ 6 ವರ್ಷದ ಬಾಲಕ, 10 ವರ್ಷದ ಬಾಲಕಿ, ಬೆಲೆಹಿತ್ಲದ 34 ವರ್ಷದ ಪುರುಷ, ಕಿಮಾನಿಯ 51 ವರ್ಷದ ಪುರುಷ, ಗುಡೆಅಂಗಡಿಯ 45 ವರ್ಷದ ಪುರುಷ, ಕಾಗಲ್‌ನ 52 ವರ್ಷದ ಪುರುಷ, ಬಾಡದ 70 ವರ್ಷದ ವೃದ್ಧ, 36 ವರ್ಷದ ಪುರುಷ, ಮೂರೂರಿನ 54 ವರ್ಷದ ಮಹಿಳೆ, ಮೂರೂರಿನ 23 ವರ್ಷದ ಮಹಿಳೆ, ಮಣ್ಕಿಯ 65 ವರ್ಷದ ಪುರುಷ, ಕೂಜಳ್ಳಿಯ 79 ವರ್ಷದ ವೃದ್ಧ, 70 ವರ್ಷದ ವೃದ್ಧೆ, ಮಿರ್ಜಾನ್‌ನ 39 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ತಾಲೂಕಿನ ಬಾಡದಲ್ಲಿ 2, ಹೆಗಡೆ 2, ಮೂರೂರ್ 2, ಕೂಜಳ್ಳಿ 2, ಬಂಕಿಕೋಡ್ಲಾ 2, ಮಾಸೂರ್ 2, ಗಾಂಧಿನಗರ 2 ಸೇರಿದಂತೆ ಗೋಕರ್ಣ, ಮಿರ್ಜಾನ್, ಬೆಲೆಹಿತ್ಲ, ಕಿಮಾನಿ, ಗುಡೆಅಂಗಡಿ, ಕಾಗಲ್ ಮುಂತಾದ ಭಾಗಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಇಂದು 16 ಜನರಲ್ಲಿ ಕರೊನಾ ಪಾಸಿಟಿವ್ ಬಂದಿದ್ದು ವಲ್ಕಿಯ 42 ವರ್ಷದ ಪುರುಷ, ಮಂಕಿಯ 45 ವರ್ಷದ ಮಹಿಳೆ, ಗೇರುಸೋಪ್ಪಾ ಕೆಪಿಸಿ ಕಾಲೋನಿಯ 37 ವರ್ಷದ ಪುರುಷ, ಬಾಸ್ಕೇರಿಯ 64 ವರ್ಷದ ಮಹಿಳೆ, ಕಡನ್ನೀರದ 33 ವರ್ಷದ ಯುವಕ, ಕುಮಟಾ ಹಂದಿಗೋಣದ 52 ವರ್ಷದ ಪುರುಷ, ಪ್ರಭಾತನಗರದ 57 ವರ್ಷದ ಪುರುಷ, 23 ವರ್ಷದ ಯುವಕ, 54 ವರ್ಷದ ಪುರುಷ, ಕರ್ಕಿನಾಕಾದ 42 ವರ್ಷದ ಪುರುಷ, 50 ವರ್ಷದ ಪುರುಷ, 62 ವರ್ಷದ ಮಹಿಳೆ, 19 ವರ್ಷದ ಯುವತಿ, 17 ವರ್ಷದ ಬಾಲಕ, 13 ವರ್ಷದ ಬಾಲಕಿ, 7 ವರ್ಷದ ಬಾಲಕಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಶಿರಸಿಯಲ್ಲಿಂದು 19 ಮಂದಿಗೆ ಕೊರೊನಾ ಪಾಸಿಟಿವ್
ಶಿರಸಿ: ನಗರದಲ್ಲಿಂದು 19 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 49 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಸೋಂಕು ದೃಢವಾದ ಪೈಕಿ ಮಾರಿಗುಡಿ ರೋಡ್ 1, ವಿದ್ಯಾ ನಗರ 1, ಹೆಗಡೆಕಟ್ಟಾ 2, ಗಾಂಧಿ ನಗರ 1, ಚಿಪಗೇರಿ 1, ಕೆಎಚ್‍ಬಿ ಕಾಲೋನಿ 1, ಹೀಪನಳ್ಳಿ 3 ಮಂಜಳ್ಳಿ 1, ವಾನಳ್ಳಿ 4, ಬನವಾಸಿ 1, ನವಣಗೇರಿ 1, ದೀವಗಿ ಪ್ಯಾಕ್ಟರಿ 1, ಬರೂರಿನಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ.
ಯಲ್ಲಾಪುರದಲ್ಲಿಂದು 18 ಮಂದಿಗೆ ಕೊರೊನಾ ದೃಢ
ಯಲ್ಲಾಪುರ: ಪಟ್ಟಣದಲ್ಲಿಂದು 18 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಬುಧವಾರ ಒಂದೇ ದಿನ 88 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸೋಂಕು ದೃಢವಾದ ಪೈಕಿ ಯಲ್ಲಾಪುರ ಪಟ್ಟಣದಲ್ಲಿ 4, ಕೋಟೆಮನೆಯಲ್ಲಿ 8, ಇಳೇಹಳ್ಳಿಯಲ್ಲಿ 2 ಹಾಗೂ ಬಾಳೆಗದ್ದೆ, ಆನಗೋಡ, ಕುಂದರಗಿ ಹಾಗೂ ನಂದಿಬಾವಿಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.