ಕುಮಟಾ: ತಾಲೂಕಿನ ಜನರನ್ನು ಎಡಬಿಡದೆ ಕಾಡುತ್ತಿರುವ ಕೊರೋನಾ ಇಂದೂ ಸಹ ಮುಂದುವರೆದಿದೆ. ಇಂದು ತಾಲೂಕಿನ ವಿವಿದೆಡೆಗಳಲ್ಲಿ ಒಟ್ಟು 35 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಹಿರೇಗುತ್ತಿಯ 33 ವರ್ಷದ ಪುರುಷ, 78 ವರ್ಷದ ವೃದ್ಧ, 23 ವರ್ಷದ ಯುವಕ, ಅಂತ್ರವಳ್ಳಿಯ 73 ವರ್ಷದ ವೃದ್ಧೆ, 30 ವರ್ಷದ ಮಹಿಳೆ, ಮಿರ್ಜಾನ್‌ನ 25 ವರ್ಷದ ಮಹಿಳೆ, 5 ವರ್ಷದ ಬಾಲಕಿ, ಹೊಂಡದಕ್ಕಲಿನ 17 ವರ್ಷದ ಬಾಲಕ, ಹೆಗಡೆಯ 27 ವರ್ಷದ ಯುವತಿ, 62 ವರ್ಷದ ಪುರುಷ, 58 ವರ್ಷದ ಪುರುಷ, 35 ವರ್ಷದ ಪುರುಷ, 25 ವರ್ಷದ ಯುವಕ, ಬೆಟ್ಗೇರಿ 55 ವರ್ಷದ ಮಹಿಳೆ, ಕಿಮಾನಿಯ 25 ವರ್ಷದ ಯುವತಿ, ಮೋರ್ಬಾದ 57 ವರ್ಷದ ಮಹಿಳೆ, 60 ವರ್ಷದ ಪುರುಷ, 80 ವರ್ಷದ ವೃದ್ಧೆ, 1 ವರ್ಷದ ಮಗು, 19 ವರ್ಷದ ಯುವಕ, ಬಾಡದ 53 ವರ್ಷದ ಮಹಿಳೆ, ಹಳಕಾರದ 32 ವರ್ಷದ ಪುರುಷ, ಹನೇಹಳ್ಳಿಯ 42 ವರ್ಷದ ಮಹಿಳೆ, ಹಂದಿಗೋಣದ 52 ವರ್ಷದ ಪುರುಷ, ಬಗ್ಗೋಣದ 65 ವರ್ಷದ ಪುರುಷ, ಕುಮಟಾದ 50 ವರ್ಷದ ಮಹಿಳೆ, 31 ವರ್ಷದ ಮಹಿಳೆ, 54 ವರ್ಷದ ಮಹಿಳೆ, 40 ವರ್ಷದ ಮಹಿಳೆ, 22 ವರ್ಷದ ಯುವಕ, 52 ವರ್ಷದ ಮಹಿಳೆ, 38 ವರ್ಷದ ಪುರುಷ, 18 ವರ್ಷದ ಯುವತಿ, 52 ವರ್ಷದ ಪುರುಷ, 55 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ? ಹಳದೀಪುರದಲ್ಲಿ ಘಟನೆ

ಹನೇಹಳ್ಳಿ, ಬಾಡ, ಕಿಮಾನಿ, ಬೆಟ್ಗೇರಿ, ಮಿರ್ಜಾನ್, ಹಂದಿಗೋಣ, ಬಗ್ಗೋಣ, ಬೆಟ್ಗೇರಿ, ಹಳಕಾರ, ಹೆಗಡೆ, ಹಿರೇಗುತ್ತಿ , ಮಿರ್ಜಾನ್ , ಅಂತ್ರವಳ್ಳಿ , ಸೇರಿದಂತೆ ಬಾಡ ಮುಂತಾದ ಪ್ರದೇಶಗಳಲ್ಲಿ ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ.

RELATED ARTICLES  ವಿದ್ಯುತ್ ಅವಗಡ: ಅಂಕೋಲಾದಲ್ಲಿ ಬಲಿಯಾಯ್ತು ಜಾನುವಾರು!

ಯಲ್ಲಾಪುರದಲ್ಲಿಂದು 13 ಮಂದಿಗೆ ಕೊರೊನಾ ದೃಢ

ಯಲ್ಲಾಪುರ: ಪಟ್ಟಣದಲ್ಲಿಂದು 13 ಜನರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 96 ಕ್ಕೇರಿದೆ.
ಇಂದು ಪಟ್ಟಣದಲ್ಲಿ 6, ಗಾಣಗದ್ದೆಯಲ್ಲಿ 3 ಹಾಗೂ ತೆಂಗಿನಗೇರಿಯಲ್ಲಿ 4 ಜನರಿಗೆ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.