ಹೊನ್ನಾವರ ತಾಲೂಕಿನಲ್ಲಿ ಬಿಟ್ಟು ಬಿಡದೆ ಕಾಡುತ್ತಿದ್ದ ಕೊರೋನಾ ಇಂದು ಏಳು ಜನರಲ್ಲಿ ಕಾಣಿಕೊಂಡಿದೆ. ಕಡ್ನೀರಿನ 34 ವರ್ಷದ ಪುರುಷ, 33 ವರ್ಷದ ಮಹಿಳೆ, 29 ವರ್ಷದ ಯುವತಿ, ಕೆರೆಕೋಣದ 47 ವರ್ಷದ ಪುರುಷ,ಚಂದಾವರದ 40 ವರ್ಷದ ಪುರುಷ, 35 ವರ್ಷದ ಮಹಿಳೆ, 20 ವರ್ಷದ ಯುವಕನಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಇಂದು ತಾಲೂಕಾ ಆಸ್ಪತ್ರೆಯಿಂದ ಮೂವರು ಡಿಸ್ಚಾರ್ಜ್ ಆಗಿರುವುದು ಸ್ವಲ್ಪಮಟ್ಟಿನ ಸಮಾಧಾನಕ್ಕೆ ಕಾರಣವಾಗಿದೆ.
ಅಂಕೋಲಾದಲ್ಲಿ 13 ಕೇಸ್.!
ಅಂಕೋಲಾ ತಾಲೂಕಿನ ಬೇಲೇಕೇರಿ, ಕಾಕರಮಠ, ಬೆಳಸೆ, ಕೇಣಿ, ಕಣಗಿಲ್, ಅವರ್ಸಾ, ಲಕ್ಷ್ಮೇಶ್ವರ, ಹಟ್ಟಿಕೇರಿ ಸೇರಿದಂತೆ ನಾನಾ ಭಾಗಗಳಿಂದ ಒಟ್ಟೂ 13 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.
ಹದಿಮೂರು ಜನರು ಕೊರೋನಾ ಗೆದ್ದು ವಾಪಸ್ಸಾಗಿದ್ದಾರೆ.
ಶಿರಸಿಯಲ್ಲಿ 23 ಮಂದಿಗೆ ಕೊರೊನಾ ದೃಢ.
ಶಿರಸಿ ನಗರದಲ್ಲಿಂದು 23 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಒಟ್ಟೂ 1153 ಸಕ್ರಿಯ ಕೇಸ್ ಪಾಸಿಟಿವ್ ಇದೆ.
ಇಂದು ದೃಢವಾದ ಪ್ರಕರಣಗಳ ಪೈಕಿ ನೆಹರು ನಗರದಲ್ಲಿ 1, ಹೂವಿನಕೊಪ್ಪಲಕೇರಿ ಬನವಾಸಿಯಲ್ಲಿ 3, ಬಚಗಾಂವದಲ್ಲಿ 2, ಟಿಎಸ್‍ಎಸ್ ರೋಡಿನಲ್ಲಿ 1, ಮಾರಿಗುಡಿ ರೋಡಿನಲ್ಲಿ 5, ಬಸವೇಶ್ವರ ನಗರದಲ್ಲಿ 1, ಗಾಂಧಿ ನಗರದಲ್ಲಿ 1, ಮೇಲಿನಕೇರಿಯಲ್ಲಿ 1, ಗಣೇಶ ನಗರದಲ್ಲಿ 2, ಕೆಎಚ್‍ಬಿ ಕಾಲೋನಿಯಲ್ಲಿ 2, ಟಿಎಸ್‍ಎಸ್ ರೈಸ್ ಮಿಲ್ ಬಳಿ 1, ಬನವಾಸಿಯಲ್ಲಿ 1, ಚಿಪಗಿ 1, ಹನುಮಂತಿ 1, ಹರೀಶಿ ಸೊರಬ 1ದಲ್ಲಿ ಒಂದು ಕೇಸ್ ಪಾಸಿಟಿವ್ ಬಂದಿದೆ. ಗುರುವಾರ ಒಟ್ಟೂ 34 ರ್ಯಾಪಿಡ್ ಟೆಸ್ಟ್ ನಡೆಸಿದ್ದು, 23 ಮಂದಿಗೆ ಪಾಸಿಟಿವ್ ಬಂದಿದೆ.