ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಕ್ಟೋಬರ್ 2 ಗಾಂಧೀಜಿಯನ್ನು ಸರಳವಾಗಿ ಆಚರಿಸಲಾಯಿತು.
ಮಹಾತ್ಮಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಶಿಕ್ಷಕ ಇ ಎಚ್ ಗೋವಿಂದ ಭಟ್ ಗಾಂಧೀಜಿಯವರ ಜೀವನ ಸರಳವೂ, ಸಾಮಾಜಿಕ ಕಳಕಳಿ ಹೊಂದಿತ್ತು ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಸಾರಿದ ಧೀಮಂತ ನಾಯಕ ಎಂದು ಅಭಿಪ್ರಾಯಪಟ್ಟರು.
ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಾಯಕತ್ವ ಅವರ ಪ್ರಾಮಾಣಿಕತೆಯ ಬಗ್ಗೆ ತಿಳಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
ಶಶಿಕುಮಾರ್ ಪೆರ್ಣೆ ಶುಭಾಶಂಸನೆಗೈದರು. ಈಶ್ವರಿ ಡಿ ಸ್ವಾಗತಿಸಿ ಶಿವಪ್ರಸಾದ್ ಸಿ ವಂದಿಸಿದರು.