ಕುಮಟಾ: ಗಾಂಧೀಜಿಯವರ 151 ನೇ ಜನ್ಮದಿನದ ಅಂಗವಾಗಿ ಕುಮಟಾದ ಹೆಡ್ ಬಂದರಿನ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸ್ವಚ್ಛತಾ ಅಭಿಯಾನದಲ್ಲಿ ಲೈನ್ಸ್ ಕ್ಲಬ್ ಕುಮಟಾದವರು ಪಾಲ್ಗೊಂಡರು. ಪುರಸಭೆ ಹಾಗೂ ಕಚೇರಿ ಸಿಬ್ಬಂದಿಗಳು ಜೊತೆಗೂಡಿ ಸಮುದ್ರ ತೀರದ ತ್ಯಾಜ್ಯಗಳನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಿದರು.

RELATED ARTICLES  ವಿಕಲಚೇತನರಿಗೆ ಅನುಕಂಪ ತೋರುವುದಕ್ಕಿಂತ ಅವರಿಗೆ ಅವಕಾಶ ಕಲ್ಪಿಸಿಕೊಡಲು ಎಲ್ಲರೂ ಪ್ರಯತ್ನಿಸಬೇಕು.

ಇದಕ್ಕೂ ಮೊದಲು ಪುರಸಭೆ ಕಾರ್ಯಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಸಹಾಯಕ ಆಯುಕ್ತ ಶ್ರೀ ರೈ,ತಹಸೀಲ್ದಾರ್ ಮೇಘರಾಜ ನಾಯ್ಕ್,ಪುರಸಭೆ ಮುಖಾಧಿಕಾರಿಗಳಾದ ಎಂ.ಕೆ ಸುರೇಶ್,ಲೈನ್ಸ್ ಅಧ್ಯಕ್ಷೆ ಶ್ರೀಮತಿ.ವಿನಯಾ ಹೆಗಡೆ, ಕಾರ್ಯದರ್ಶಿ ಎಸ್.ಎಸ್.ಹೆಗಡೆ ,ಪುರಸಭೆ ನೌಕರರು,ಪಿ.ಡಬ್ಲೂ. ಡಿ ಸಿಬ್ಬಂಧಿ,ಹಲವು ಸ್ವಯಂಸೇವಾ ಸಂಸ್ಥೆಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂದಿದ್ದುದು ವಿಶೇಷವಾಗಿತ್ತು.

RELATED ARTICLES  ಬ್ಯಾಂಕ್ ಶಾಖೆ ವಿಲೀನ ಪ್ರಕ್ರಿಯೆ : ಕುಮಟಾದ ಗುಡೇಅಂಗಡಿಯಲ್ಲಿ ಪ್ರತಿಭಟನೆ!