ಕುಮಟಾ : ಕೊರೋನಾ ಕಾಟ ಕುಮಟಾದ ಜನರಿಗೆ ತುಂಬಾನೇ ಹೆಚ್ಚುತ್ತಿದೆ. ಎಗ್ಗಿಲ್ಲದೆ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕೇ ಬರುತ್ತಿಲ್ಲ ಎಂಬಂತಾಗಿದೆ. ಇಂದು ಕೂಡಾ ತಾಲೂಕಿನಲ್ಲಿ ಬರೋಬ್ಬರಿ 45 ಜನರಿಗೆ ಕೊರೋನಾ ಪಾಸಿಟೀವ್ ದಾಖಲಾಗಿದೆ.

ಅಳ್ಕೋಡ್‌ನ 19 ವರ್ಷದ ಯುವತಿ, ವಾಲಗಳ್ಳಿಯ 64 ವರ್ಷದ ಮಹಿಳೆ, 46 ವರ್ಷದ ಪುರುಷ, 76 ವರ್ಷದ ವೃದ್ಧ, 39 ವರ್ಷದ ಮಹಿಳೆ, 2 ವರ್ಷದ ಮಗು, 17 ವರ್ಷದ ಬಾಲಕಿ,ಮಿರ್ಜಾನಿನ 18 ವರ್ಷದ ಯುವತಿ, 28 ವರ್ಷದ ಯುವತಿ, 27 ವರ್ಷದ ಯುವಕ, ಹೆಗಡೆಯ 36 ವರ್ಷದ ಪುರುಷ, 47 ವರ್ಷದ ಮಹಿಳೆ, ಕಲ್ಲಬ್ಬೆಯ 48 ವರ್ಷದ ಪುರುಷ, ವಕ್ಕನಳ್ಳಿಯ 32 ವರ್ಷದ ಮಹಿಳೆ, ಬಾಡದ 9 ವರ್ಷದ ಬಾಲಕಿ, 70 ವರ್ಷದ ವೃದ್ಧೆ,

ಕುಮಟಾದ 55 ವರ್ಷದ ಮಹಿಳೆ, 18 ವರ್ಷದ ಯುವಕ, ಕಿಮಾನಿಯ 36 ವರ್ಷದ ಪುರುಷ, ಉಪ್ಪಾರ್‌ಕೇರಿಯ 18 ವರ್ಷದ ಯುವಕ, ದೇವರಬಾವಿಯ 16 ವರ್ಷದ ಬಾಲಕಿ, ಹಂದಿಗೋಣದ 40 ವರ್ಷದ ಪುರುಷ, 3 ವರ್ಷದ ಮಗು, 11 ವರ್ಷದ ಬಾಲಕ,

RELATED ARTICLES  ದೀವಗಿ ಗ್ರಾ.ಪಂ ಗೆ ಜಗದೀಶ ಭಟ್ಟ ಅಧ್ಯಕ್ಷ.

ಕತಗಾಲ್‌ನ 15 ವರ್ಷದ ಬಾಲಕ, 19 ವರ್ಷದ ಯುವತಿ, 45 ವರ್ಷದ ಮಹಿಳೆ, 20 ವರ್ಷದ ಯುವತಿ, 6 ವರ್ಷದ ಬಾಲಕಿ, 18 ವರ್ಷದ ಯುವತಿ, 9 ವರ್ಷದ ಬಾಲಕ, ಹುಬ್ಬಣಗೇರಿಯ 45 ವರ್ಷದ ಮಹಿಳೆ, ಯಾಣದ 25 ಯುವತಿ, 48 ವರ್ಷದ ಮಹಿಳೆ, 57 ವರ್ಷದ ಮಹಿಳೆ, ಬೆಟ್ಕುಳಿಯ 19 ವರ್ಷದ ಯುವಕ, ಕಲ್ಲಬ್ಬೆಯ 50 ವರ್ಷದ ಮಹಿಳೆ, ತಾರಿಬಾಗಿಲಿನ 38 ವರ್ಷದ ಪುರುಷ, ಗುಡ್‌ಕಾಗಲ್‌ನ 65 ವರ್ಷದ ವೃದ್ಧ, ಬಗ್ಗೋಣದ 47 ವರ್ಷದ ಪುರುಷ, ಮೂರೂರಿನ 68 ವರ್ಷದ ವೃದ್ಧ, ಹೆರವಟ್ಟಾದ 48 ವರ್ಷದ ಪುರುಷ, ಹಿರೇಗುತ್ತಿಯ 58 ವರ್ಷದ ಮಹಿಳೆ, 26 ವರ್ಷದ ಯುವಕಗೆ ಸೋಂಕು ದೃಢಪಟ್ಟಿದೆ.

ತಾಲೂಕಿನ ಹಂದಿಗೋಣ 3, ಹೆಗಡೆ 2, ಬಾಡ 2 ಸೇರಿದಂತೆ ಹುಬ್ಬಣಗೇರಿ, ಯಾಣ, ಬೆಟ್ಕುಳಿ, ಕಲ್ಲಬ್ಬೆ, ಗುಡ್‌ಕಾಗಲ್, ಬಗ್ಗೋಣ, ದೇವರಬಾವಿ, ಕಿಮಾನಿ, ಕತಗಾಲ್‌, ವಾಲಗಳ್ಳಿ, ಮಿರ್ಜಾನ್, ಮುಂತಾದ ಭಾಗಗಳಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೊರೋನಾ ಹೆಚ್ಚುತ್ತಲೇ ಇದ್ದು ಜನರು ತೀರಾ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

RELATED ARTICLES  ಫಾಸ್ಟ್ ಫುಡ್ ಮಾರಾಟ ಮಾಡುತ್ತಿದ್ದರು ದೊಡ್ಡ ಕಳ್ಳರು!

ಹೊನ್ನಾವರ ತಾಲೂಕಿನಲ್ಲಿ ಕೊರೋನಾಕ್ಕೆ ಒಂದು ಸಾವು : ಇಂದು 12 ಪ್ರಕರಣ.

ತಾಲೂಕಿನಲ್ಲಿ ಕೊರೋನಾ ಏರುವ ಜೊತೆಗೆ ಇಂದು ಓರ್ವನನ್ನು ಬಲಿಪಡೆದಿದೆ. ಮಂಗಳೂರಿನ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಚಂದಾವರ ಮೂಲದ 60 ವರ್ಷದ ಪುರುಷನಿಗೆ ಕಳೆದ ಎರಡು ದಿನದ ಹಿಂದೆ ಪಾಸಿಟಿವ್ ಬಂದಿತ್ತು. ಈತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು. ಈತನಿಗೆ ಕರೊನಾ ಇರುವುದು ದೃಢವಾಗಿರುವ ಬಗ್ಗೆ ವರದಿಯಾಗಿದೆ.ಈತ ಮೂಲವ್ಯಾಧಿ ಸಮಸ್ಯೆಯಿಂದಲೂ ಬಳಲುತ್ತಿದ್ದ ಎನ್ನಲಾಗಿದೆ.

ತಾಲೂಕಿನಲ್ಲಿಯೂ ಕೊರೋನಾ ಆರ್ಭಟ ಮುಂದುವರೆದಿದ್ದು ಕೆರೆಕೋಣದ 38 ವರ್ಷದ ಪುರುಷ, ಗೇರುಸೊಪ್ಪಾ ಕೆ.ಪಿಸಿ ಕಾಲೋನಿಯ 38 ವರ್ಷದ ಪುರುಷ, 27 ವರ್ಷದ ಯುವಕ, ಕಳಸಮೊಟೆಯ 27 ವರ್ಷದ ಮಹಿಳೆ, ದೊಡ್ಡಗುಂದದ 34 ವರ್ಷದ ಮಹಿಳೆ, 34 ವರ್ಷದ ಪುರುಷ, ಹಳದೀಪುರದ 33 ವರ್ಷದ ಪುರುಷ, ಕಡತೋಕಾದ 47 ವರ್ಷದ ಪುರುಷ, 68 ವರ್ಷದ ಮಹಿಳೆ, 36 ವರ್ಷದ ಮಹಿಳೆ, 5 ವರ್ಷದ ಬಾಲಕ, 36 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ