ಅಂಕೋಲಾ ತಾಲೂಕಿನಲ್ಲಿ ಶುಕ್ರವಾರ ಒಟ್ಟೂ 7 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಬೇಲೇಕೇರಿ, ಲಕ್ಷ್ಮೇಶ್ವರ, ಹುಲಿದೇವರವಾಡ, ಚಂದುಮಠ, ಕಣಗಿಲ್ ವ್ಯಾಪ್ತಿಯಲ್ಲಿ ತಲಾ ಒಂದು ಮತ್ತು ಪುರಸಭೆ ಹತ್ತಿರದ ವಾರ್ಡ್‍ನಲ್ಲಿ ಎರಡು ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.
ಯಲ್ಲಾಪುರದಲ್ಲಿಂದು 5 ಕೊರೊನಾ ದೃಢ
ಯಲ್ಲಾಪುರಪಟ್ಟಣದಲ್ಲಿಂದು ಐದು ಜನರಿಗೆ ಕೊರೊನಾ ಧೃಢಪಟ್ಟಿದ್ದು, ಅರಬೈಲ್, ಮಂಜುನಾಥನಗರ, ಚರ್ಚ್ ರೋಡ್, ನಾರಾಯಣಪುರಗಳಲ್ಲಿ ತಲಾ ಒಬ್ಬರಿಗೆ ಸೋಂಕು ಧೃಢಪಟ್ಟಿದೆ. ಕುಮಟಾದ ಕತಗಾಲಿನವರೊಬ್ಬರು ಯಲ್ಲಾಪುರದಲ್ಲಿ ತಪಾಸಣೆಗೊಳಪಟ್ಟಿದ್ದು ಅವರಿಗೂ ಪಾಸಿಟಿವ್ ಬಂದಿದೆ.
ಶಿರಸಿಯಲ್ಲಿಂದು 2 ಕೊರೊನಾ ದೃಢ
ಶಿರಸಿ: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಶುಕ್ರವಾರ 21 ಮಂದಿಗೆ ಪಾಸಿಟಿವ್ ಬಂದಿದ್ದು ನೆಹರು ನಗರದಲ್ಲಿ 2, ಟಿಎಸ್‍ಎಸ್ ರಸ್ತೆಯಲ್ಲಿ 3, ರಾಮನಗರದಲ್ಲಿ 1, ಯಲ್ಲಾಪುರ ನಾಕಾ 3 ಕೆಎಚ್‍ಬಿ ಕಾಲೋನಿ 1, ಎಸಳೆ 2, ಯಲ್ಲಾಪುರ ರೋಡಿನಲ್ಲಿ 1, ಬನವಾಸಿ ರೋಡ್ 1, ಕೂರ್ಸೆ ಕಂಪೌಂಡ್ 1, ಮರಾಠಿಕೊಪ್ಪ 1, ಕೋಳಿಗಾರ್ 1, ಸಿ.ಪಿ ಬಝಾರ್ 1, ಬಾಪೂಜಿನ ನಗರ 2, ವಿದ್ಯಾನಗರದಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ.