ಕುಮಟಾ : ತಾಲೂಕಿನಿಂದ ಶಿರಸಿಗೆ ತೆರಳುವ ದೇವಿಮನಿ ಘಾಟ ರಸ್ತೆಯಲ್ಲಿ ಇಂದು ಮಧ್ಯಾಹ್ನ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರನಿಗೆ ತೀವ್ರವಾಗಿ ಪೆಟ್ಟಾಗಿರುವ ಘಟನೆ ವರದಿಯಾಗಿದೆ.
ಆದರ್ಶ ಎಂಬ ಬೈಕ್ ಸವಾರನ ಬಾಯಿ ಮತ್ತು ಎಡಗಾಲು ಮುರಿತ ಉಂಟಾದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು. ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ ಎಂದು ವರದಿಸಿದ್ದಾರೆ.
ರಸ್ತೆಯ ಮಧ್ಯೆ ನರಳಾಡುತ್ತಿದ್ದ ಬೈಕ್ ಸವಾರರಿಗೆ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರರು ಸಹಾಯ ಮಾಡಿ ಮಾನವೀಯತೆ ಮೆರದಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.