ಶ್ರೀ ಕ್ಷೇತ್ರ ಸಿಗಂಧೂರಿನ ಚೌಡೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಕುರಿತು ಕರೂರು ಹೋಬಳಿಯ ಗ್ರಾಮಸ್ಥರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಘಟನೆಯ ಕುರಿತಾಗಿ ಅವರು ನೀಡಿದ ಮನವಿಯ ಯಥಾವಾಕ್ಯ ಇಲ್ಲಿದೆ.

ಮನವಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಕಳವಸಳ್ಳಿ ಗ್ರಾಮದಲ್ಲಿ ಸಿಗಂಧೂರಿನಲ್ಲಿ ಶ್ರೀ
ಚೌಡೇಶ್ವರಿ ದೇವಾಲಯವಿರುತ್ತದೆ. ಈ ದೇವಾಲಯವಿರುವ ಸ್ಥಳ ಕಳಸವಳ್ಳಿ ಗ್ರಾಮದ ಸ.ನಂ: 65 ರ ಸರ್ಕಾರಿ ಸ್ವಪ್ಪಿನ
ಬೆಟ್ಟವಾಗಿದ್ದು ಹಾಲಿ ವನ್ಯಜೀವಿ ಅರಣ್ಯ ವಲಯ ಕಾರ್ಗಲ್ ಪ್ರದೇಶಕ್ಕೆ ಸೇರಿದ್ದು ಈ ಸ್ಥಳದಲ್ಲಿಯೇ ನಮ್ಮ ಪೂರ್ವಜರ
ಕಾಲದಿಂದಲೂ ಶ್ರೀ ಚೌಡೇಶ್ವರಿ ದೇವಾಲಯವಿರುತ್ತದೆ. ಈ ದೇವಾಲಯದ ಪೂಜಾ ಕೈಂಕರ್ಯವನ್ನು ಗ್ರಾಮಸ್ಥರ
ಸಹಕಾರದೊಂದಿಗೆ ಈ ಹಿಂದೆ ನಮ್ಮ ಗ್ರಾಮದವರೇ ಆದ ಶ್ರೀ ಬಿಷ್ಟಯ್ಯ ಎಂಬುವರು ಅವರ ಕಾಲಾನಂತರ ಅವರ
ಮಗನಾದ ಪರಮೇಶ್ವರ ಭಟ್ಟ ಎಂಬುವರು, ಅವರ ಕಾಲಾನಂತರ ಇವರ ಮಗನಾದ ಶ್ರೀ ಶೇಷಗಿರಿ ಭಟ್ಟ ಬಿನ್ ಪರಮೇಶ್ವರ ಭಟ್ಟ ಇವರು ಪೂಜಾ ಕಾರ್ಯಗಳನ್ನು ಗ್ರಾಮಸ್ಥರ ಸಹಕಾರದಿಂದ ನಡೆಸಿಕೊಂಡು ಬಂದಿರುತ್ತಾರೆ.

ಈ ದೇವಸ್ಥಾನವು ಸರ್ಕಾರಿ ಜಾಗದಲ್ಲಿದ್ದು ಈ ದೇವಸ್ಥಾನದ ಮೇಲೆ ಯಾವುದೇ ವ್ಯಕ್ತಿಯ ಅಥವಾ ಯಾವುದೇ ಸಂಘ ಸಂಸ್ಥೆಯ ಅಥವಾ ಯಾವುದೇ ಕುಟುಂಬವನ್ನು ಒಳಗೊಂಡ ಆಡಳಿತ ಮಂಡಳಿಯ ಹಕ್ಕು ಇರುವುದಿಲ್ಲಾ. ಈ ದೇವಸ್ಥಾನವು ಕಳಸವಳ್ಳಿ ಹಾಗೂ ಕರೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳ ಸಹಾಯದೊಂದಿಗೆ ನಡೆಯುತ್ತಿತ್ತು.

RELATED ARTICLES  ಕರ್ನಾಟಕದ ಕುಳ್ಳ ಖ್ಯಾತಿಯ ಚಿತ್ರನಟ ದ್ವಾರಕೀಶ್ ಇನ್ನಿಲ್ಲ.


ಇತ್ತೀಚಿನ ವರ್ಷಗಳಲ್ಲಿ ಈ ಶ್ರೀ ಸಿಗಂಧೂರು ಚೌಡೇಶ್ವರಿಯ ದೇವಾಲಯಕ್ಕೆ ಕರೂರು ಹೋಬಳಿಯ ಭಕ್ತರಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಕೂಡ ಭಕ್ತಾಧಿಗಳು ಬೇಟಿ ಕೊಟ್ಟು ಪೂಜಾ ಸೇವೆ ಸಲ್ಲಿಸುತ್ತಿದ್ದಾರೆ. ಈ ದೇವಸ್ಥಾನದ ಹಾಲಿ ಪ್ರಧಾನ ಅರ್ಚಕರಾದ ಶ್ರೀ ಶೇಷಗಿರಿ ಭಟ್ಟ ಇವರು ಗ್ರಾಮದ ಹಾಗೂ ಹೋಬಳಿಯ ಎಲ್ಲಾ ಭಕ್ತಾಧಿಗಳ ಸಹಕಾರವನ್ನು ಪಡೆದು ಪೂಜಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದು ಗ್ರಾಮದ ಮತ್ತು ಹೋಬಳಿಯ ಹಾಗೂ ರಾಜ್ಯದ ಭಕ್ತಾಧಿಗಳಿಗೆ ಪ್ರೀತಿ ಪಾತ್ರರಾಗಿದ್ದಾರೆ.

ಶ್ರೀ ಶೇಷಗಿರಿ ಭಟ್ಟ ಇವರು ಗ್ರಾಮಸ್ಥರ ಸಹಕಾರ ಪಡೆದು ದೇವಸ್ಥಾನದ ಆವರಣದಲ್ಲಿ ಪೂಜಾ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಹಣ್ಣು ಕಾಯಿ, ಕುಂಕುಮಾರ್ಚನೆ, ಪ್ರಸಾದ ವಿತರಣೆಯ ಕೌಂಟರ್‌ಗಳನ್ನು ಮಾಡಿಕೊಂಡು, ಈ ಕೌಂಟರ್‌ಗಳ ಮೂಲಕ ಭಕ್ತರಿಂದ ಬಂದಿರುವ ಸೇವಾ ಕಾಣಿಕೆಯನ್ನು ಸ್ವೀಕರಿಸಿ ಉತ್ತಮ ಪೂಜಾ ಕಾರ್ಯಗಳನ್ನು ಮಾಡುತ್ತಿರುವುದಲ್ಲದೇ, ದೇವಾಲಯದ ಒಳಗಡೆ ಬರುವ ಭಕ್ತಾಧಿಗಳ ಸೇವಾ ವೆವಸ್ಥೆಗಳಿಗಿರುವ ಸಿಬ್ಬಂದಿಗಳ ವೆಚ್ಚ
ಹಾಗೂ ಇತರೆ ವೆಚ್ಚಗಳನ್ನು ಭರಿಸುತ್ತಾ ಬಂದಿರುತ್ತಾರೆ.

ಈ ರೀತಿ ಇರುವ ಸಂಧರ್ಭದಲ್ಲಿ ದಿ. 28.09.2020 ರಂದು ಕೆಲವು ಅಪರಿಚಿತ ವ್ಯಕ್ತಿಗಳು ದೇವಾಸ್ಥಾನದ ಒಳಗಡೆ ಅನಧಿಕೃತ ಪ್ರವೇಶ ಮಾಡಿ ಶ್ರೀ ಶೇಷಗಿರಿ ಭಟ್ಟ ಇವರು ತಮ್ಮ ಪೂಜಾ ವ್ಯವಸ್ಥೆಗಾಗಿ ಮಾಡಿರುವ ಕೌಂಟರ್‌ಗಳನ್ನು ಧ್ವಂಸ ಮಾಡಿ ಅಲ್ಲಿರುವ ಕೆಲವು ಪೂಜಾ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದು ದೇವಸ್ಥಾನದ ಒಳಗಿನ ವಾತಾವರಣವನ್ನು ಕೆಡಿಸಿರುತ್ತಾರೆ.

RELATED ARTICLES  ಉತ್ತರ ಕನ್ನಡದಲ್ಲಿ ಮತ್ತೆ ಏರಿದ ಕೊರೋನಾ ಪಾಸಿಟೀವ್ ಕೇಸ್ ಸಂಖ್ಯೆ

ಈ ಸಂಭಂಧ ಪಟ್ಟಂತೆ ಶ್ರೀ ಶೇಷಗಿರಿ ಭಟ್ಟ ಇವರು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಹ ನೀಡಿರುತ್ತಾರೆ.ಈ ಕಾರಣದಿಂದ ಕಳೆದ ಮೂರು ನಾಲ್ಕು ದಿನಗಳಿಂದ ದೇವಸ್ಥಾನದ ಆವರಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಯಾವತ್ತು ಪ್ರತಿನಿತ್ಯ ದೇವಾಲಯಕ್ಕೆ ಭೇಟಿ ಮಾಡಿ ದೇವರ ದರ್ಶನ ಪಡೆದು ಅಲ್ಲಿ ಸೇವಾ ಕಾರ್ಯಮಾಡುವ ಕಳಸವಳ್ಳಿ ಹಾಗೂ ಹೊಸಳ್ಳಿ ಹಾಗೂ ಕಡೂರು ಹೋಬಳಿಯ ಗ್ರಾಮಸ್ಥರಿಗೆ ಭಯದ ವಾತಾವರಣ ಉಂಟಾಗಿರುತ್ತದೆ ಹಾಗೂ ಯಾವಾಗಲೂ ಭಕ್ತಿ ಭಾವದಿಂದ ತುಂಬಿರುವ ದೇವಸ್ಥಾನದ ಆವರಣದಲ್ಲಿ ಅಶಾಂತಿ ನಲೆಸಿದೆ. 


ಆದ್ದರಿಂದ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶ ಮಾಡಿ ಕಳಸವಳ್ಳಿ ಗ್ರಾಮದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಶಾಂತಿ ಭಂಗವಾಗುತ್ತಿರುವುದನ್ನು ತಡೆಗಟ್ಟಿ ನಮ್ಮ ಗ್ರಾಮದ ದೇವತೆಯಾದ ಶ್ರೀ ಕ್ರಮಕೈಗೊಳ್ಳಬೇಕಾಗ ಕೇಳಿಕೊಳ್ಳುತ್ತೇವೆ.

ವಂದನೆಗಳೊಂದಿಗೆ…
ಕಳವಸವಳ್ಳಿ, ಹೊಸಳ್ಳಿ ಹಾಗೂ
ಕರೂರು ಹೋಬಳಿ ಗ್ರಾಮಸ್ಥರು