ಕುಮಟಾ ತಾಲೂಕಿನಲ್ಲಿ ಇಂದೂ ಕೂಡಾ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಇಂದು 14 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ.
ಕತಗಾಲ್‌ನ 66 ವರ್ಷದ ವೃದ್ಧ, 3 ವರ್ಷದ ಮಗು, ಬೆಲೆಹಿತ್ಲದ 36 ವರ್ಷದ ಪುರುಷ, ಗೋಕರ್ಣದ 33 ವರ್ಷದ ಪುರುಷ, ಕಲ್ಕೇರಿಯ 8 ವರ್ಷದ 8 ವರ್ಷದ ಬಾಲಕ,ಸಿದ್ಧನಬಾವಿಯ 22 ವರ್ಷದ ಪುರುಷ, ಹೆರವಟ್ಟಾದ 30 ವರ್ಷದ ಪುರುಷ, 30 ವರ್ಷದ ಮಹಿಳೆ, ಕುಮಟಾದ 29 ವರ್ಷದ ಯುವಕ, ಮುಸ್ಲಿಂ ಗಲ್ಲಿಯ 65 ವರ್ಷದ ಪುರುಷ, ಮಸಾಕಲ್‌ನ 29 ವರ್ಷದ ಯುವತಿ, ಕೊಡ್ಕಣಿಯ 30 ವರ್ಷದ ಮಹಿಳೆ, 31 ವರ್ಷದ ಮಹಿಳೆ, 11 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿದೆ.
ತಾಲೂಕಿನ ಕೊಡ್ಕಣಿಯಲ್ಲಿ 3, ಕತಗಾಲ್ 2, ಹೆರವಟ್ಟಾ 2, ಸೇರಿದಂತೆ ಬೆಲೆಹಿತ್ಲ, ಕಲ್ಕೇರಿ, ಸಿದ್ಧನಬಾವಿ, ಮುಸ್ಲಿಂ ಗಲ್ಲಿ ಮುಂತಾದ ಭಾಗಗಳಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಮಾಸ್ಕ್ ಇಲ್ಲದೇ ಓಡಾಡಿದರೆ ದಂಡ ಕಟ್ಟಿಟ್ಟ ಬುತ್ತಿ
ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿಕೊಂಡು ದಂಡವನ್ನು ಹಾಕುವ ಕಾಯಕಕ್ಕೆ ಕೈಹಾಕಿದ್ದಾರೆ.
ನಗರದಲ್ಲಿ ಮಾಸ್ಕ ಹಾಕದೆ ಓಡಾಡುತ್ತಿರುವ ಹಾಗೂ ಮಾಸ್ಕ್ ಹಾಕದೆ ವ್ಯವಹರಿಸುತ್ತಿರುವ ಅಂಗಡಿಕಾರರ ಮೇಲೆ ಪೊಲೀಸರು ಗರಂ ಆಗಿದ್ದು ಎಲ್ಲರಿಗೂ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ.
ಈಗಾಗಲೇ ಕಳೆದ ಒಂದು ವಾರದಿಂದ ಮುನ್ನೂರಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಿದ್ದು ಇಂದೂ ಸಹ ದಂಡ ಹಾಕುವ ಪ್ರಕ್ರಿಯೆ ಚಾಲನೆಯಲ್ಲಿದೆ. ಸಾರ್ವಜನಿಕರಲ್ಲಿ ಕೊರೊನಾ ಬಗ್ಗೆ ಹಾಗೂ ಮಾಸ್ಕ ಧರಿಸುವುದರಿಂದ ಆಗುವ ಉಪಯೋಗದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಸಹ ಪೊಲೀಸರು ಕೈಗೊಂಡಿದ್ದಾರೆ.