ಮುಂಡಗೋಡ: ಕಾಡು ಹಾಗಲಕಾಯಿ ತರಲು ಹೋಗಿದ್ದ ವ್ಯಕ್ತಿಯ ಮೇಲೆ ಎರಡು ಕರಡಿಗಳು ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ನ್ಯಾಸರ್ಗಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಜರುಗಿದೆ.
ಕರಡಿಗಳ ದಾಳಿಗೆ ನ್ಯಾಸರ್ಗಿ ಗ್ರಾಮದ ನಿರಂಜನ್ ದಡೆದವರ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ಈತ ನ್ಯಾಸರ್ಗಿ ಅರಣ್ಯದಲ್ಲಿ ಬೆಳಿಗ್ಗೆ 8ಗಂಟೆಯ ಹೊತ್ತಿಗೆ ಅರಣ್ಯ ಪ್ರದೇಶದಲ್ಲಿ ತನ್ನ ಎತ್ತು ಕಳೆದಿರುವುದನ್ನು ಹುಡುಕಾಟ ನಡೆಸಿದ್ದಾನೆ. ಎತ್ತು ಹೊಡೆದುಕೊಂಡು ಬರುವಾಗ ಕಾಡು ಹಾಗಲಕಾಯಿ ಕಂಡಿವೆ ಅವನ್ನು ತರಲು ಹೋದಾಗ ಒಮ್ಮೇಲೆ ಎರಡು ಕರಡಿಗಳು ದಾಳಿ ಮಾಡಿ, ತಲೆ, ಕೈ ಕಾಲುಗಳಿಗೆ ಇನ್ನು ಹಲವು ಕಡೆಗಳಲ್ಲಿ ಕಚ್ಚಿ ಯುವಕನನ್ನು ಗಾಯಗೊಳಿಸಿವೆ.
ಗಂಭೀರವಾಗಿ ಗಾಯಗೊಳಿಸಿದರು ಹೆದರದ ಯುವಕ ಧೈರ್ಯದಿಂದ ಕರಡಿಗಳಿಂದ ತಪ್ಪಿಸಿಕೊಂಡು ಅರಣ್ಯದಲ್ಲಿಯೆ ಮರವನ್ನು ಹತ್ತಿ ಕುಳಿತು ತನ್ನ ಮೊಬೈಲ್‍ನಿಂದ ಗ್ರಾಮಸ್ಥರಿಗೆ ಕರೆ ಮಾಡಿ ಕರಡಿ ದಾಳಿಯ ಬಗ್ಗೆ ಹೇಳಿದ್ದಾನೆ. ನಂತರ ಜನರು ಆತನನ್ನು ರಕ್ಷಿಸಿದರು ಎಂದು ವರದಿಯಾಗಿದೆ.