ದೃಢಪಟ್ಟಿದ್ದು, ಮುಗ್ವಾ ಸುರಕಟ್ಟೆಯ ಪುರುಷ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇಂದು ಪಟ್ಟಣ ಭಾಗದಲ್ಲಿ 1 ಮತ್ತು ಗ್ರಾಮೀಣ ಭಾಗದ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಚಂದಾವರ, ಹಡಿನಬಾಳ, ಅರೇಂಗಡಿ, ಹಳದೀಪುರ, ರಾಯಲಕೇರಿ ಮುಂತಾದ ಕಡೆ ಸೋಂಕು ಪತ್ತೆಯಾಗಿದೆ.
ಚಂದಾವರದ 66 ವರ್ಷದ ಮಹಿಳೆ, 40 ವರ್ಷದ ಪುರುಷ, ಹಡಿನಬಾಳದ 50 ವರ್ಷದ ಪುರುಷ, 46 ವರ್ಷದ ಮಹಿಳೆ, ಹಳದೀಪುರದ 24 ವರ್ಷದ ಯುವಕ, ಅರೆಂಗಡಿಯ 48 ವರ್ಷದ ಪುರುಷ, 16 ವರ್ಷದ ಬಾಲಕ, ಹೊನ್ನಾವರ ಪಟ್ಟಣದ ರಾಯಲಕೇರಿಯ 84 ವರ್ಷದ ಪುರುಷನಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದೆ.
ಮುಗ್ವಾ ಸುರಕಟ್ಟೆಯ 65 ವರ್ಷದ ಪುರುಷ ಮಂಗಳೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ಸಂದರ್ಭದಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.