ಉತ್ತರಕನ್ನಡದ ಹಲವೆಡೆ ಕರೋನಾ ಆರ್ಭಟ ಮುಂದುವರೆದಿದೆ. ಪ್ರಮುಖ ತಾಲೂಕುಗಳಾದ ಹೊನ್ನಾವರ,ಶಿರಸಿ ಅಂಕೋಲಾದಲ್ಲಿ ಅನೇಕ ಪ್ರಕರಣಗಳು ಕಂಡುಬಂದಿದೆ.

ಅಂಕೋಲಾದಲ್ಲಿ 17 ಪ್ರಕರಣ

ಅಂಕೋಲಾ ತಾಲೂಕಿನಲ್ಲಿ ಅವರ್ಸಾ ವ್ಯಾಪ್ತಿಯ ಕವಲಗದ್ದೆ, ನೀಲಪುರಂ, ಭಾವಿಕೇರಿ, ಅಚವೆ, ಮೊಗಟಾ, ವಂದಿಗೆ, ಮಂಜಗುಣಿ, ಬೊಬ್ರುವಾಡ, ಕಾಕರಮಠ, ಕಬಗಾಲ, ದಿನಕರ ದೇಸಾಯಿ ರಸ್ತೆಗೆ ಹೊಂದಿಕೊಂಡ ಪ್ರದೇಶ ವ್ಯಾಪ್ತಿ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಇಂದು ಒಟ್ಟೂ 17 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ.

RELATED ARTICLES  ಈಡೇರಿತು ಬಹುದಿನದ ಜನತೆಯ ಬೇಡಿಕೆ : ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸುನೀಲ್ ನಾಯ್ಕ.

ಹೊನ್ನಾವರದಲ್ಲಿ ಏಳು ಕೇಸ್

ಹೊನ್ನಾವರ ಪಟ್ಟಣದ ಕಿಂತಾಲಕೇರಿಯ 3 ವರ್ಷದ ಮಗು, ಪಟ್ಟಣದ ಖಾಸಗಿ ಆಸ್ಪತ್ರೆಯ 30 ವರ್ಷದ ಯುವತಿ, ಪಟ್ಟಣದ 36 ವರ್ಷದ ಮಹಿಳೆ, ಕರ್ನಲ್ ಹಿಲ್ ನ 32 ವರ್ಷದ ಯುವಕ, ನವಿಲಗೋಣದ 76 ವರ್ಷದ ಪುರುಷ, 40 ವರ್ಷದ ಪುರುಷ, ಕರ್ಕಿಯ 27 ವರ್ಷದ ಯುವಕ ಸೇರಿ ಏಳು ಜನರಿಗೆ ಪಾಸಿಟಿವ್ ಬಂದಿದೆ.

ಶಿರಸಿಯಲ್ಲಿಂದು 35 ಮಂದಿಗೆ ಕೊರೊನಾ ಪಾಸಿಟಿವ್

ಶಿರಸಿ ನಗರದಲ್ಲಿಂದು 35 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 9 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರವಿವಾರ ಬಚಗಾಂವ 1, ವಿದ್ಯಾನಗರ 1, ಪಡಿಗೇರಿ 13, ಮಾರಿಗುಡಿ ರೋಡ್ 2, ವಾನಳ್ಳಿ 1, ಮರಾಠಿಕೊಪ್ಪ 2, ಟಿಎಸ್‍ಎಸ್ ರೋಡ್ 4, ಶೀಗೆಹಳ್ಳಿ 2, ಯಲ್ಲಾಪುರ ರೋಡ್ 1, ಬಾಳೆಹಳ್ಳಿ 1, ಸಹ್ಯಾದ್ರಿ ರೋಡ್ 4, ಬನವಾಸಿ ರೋಡ್ 1, ರಾಮನಗರ 1, ಕಂಡ್ರಾಜಿ 1 ಕೇಸ್ ಪಾಸಿಟಿವ್ ಬಂದಿದೆ.
ತಾಲೂಕಿನಲ್ಲಿ ಒಟ್ಟೂ 1221 ಕೊರೊನಾ ಪಾಸಿಟಿವ್ ಬಂದಿದೆ.

RELATED ARTICLES  ಹೊನ್ನಾವರ ಮಾವಿನಕುರ್ವಾ ಶ್ರೀ ನವದುರ್ಗಾ ದೇವರ ಸನ್ನಿಧಿಯಲ್ಲಿ ವರ್ಧಂತಿ ಉತ್ಸವ