ಗೋಕರ್ಣ: ಕೊರೋನಾ ಮುನ್ನೆಚ್ಚರಿಕೆ ಕಾರಣದಿಂದ ಸಾರ್ವಜನಿಕರಿಗೆ ದರ್ಶನ ಅವಕಾಶ ನಿಲ್ಲಿಸಲಾಗಿದ್ದ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಇಂದು ಭಕ್ತರಿಗೆ ತೆರೆದುಕೊಂಡಿದೆ. ಇಂದಿನಿಂದ ಸಾರ್ವಜನಿಕರು ಎಂದಿನಂತೆ ಆತ್ಮಲಿಂಗದ ದರ್ಶನ ಪಡೆಯಬಹುದಾಗಿದೆ.

ಅಂದಿನಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ಎಲ್ಲ ಸೇವಾವಕಾಶಗಳು ಪ್ರಾರಂಭವಾಗಿದೆ. ಕೊರೊನಾ ವೈರಸ್ ಸಂಬಂಧ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ದೇಗುಲಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ದೇಗುಲವು ಆರು ತಿಂಗಳಿನ ಬಳಿಕ ಸಾಮಾನ್ಯ ಭಕ್ತರಿಗೆ ಇಂದು ತೆರೆದುಕೊಳ್ಳುತ್ತಿದೆ.

RELATED ARTICLES  ಮನೆಮನೆಗೆ ರಾಘವ ರಾಮಾಯಣ:ಧರ್ಮಭಾರತಿ ವಿಶೇಷ ಅಭಿಯಾನ

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕಟ್ಟುನಿಟ್ಟಾಗಿ ಅಂತರ ಕಾಯ್ದುಕೊಳ್ಳಬೇಕು. ಮುಖಗವಸು ಧರಿಸುವುದು, ನೈರ್ಮಲ್ಯ ಕಾಪಾಡುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ.ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ತಿಳಿಸಿದ್ದಾರೆ.

RELATED ARTICLES  ಹೊನ್ನಾವರ ಮೂಲದ ಕರ್ನಾಟಕ ವಿಶ್ವಾವಿದ್ಯಾಲಯದಲ್ಲಿ ಸಾಂಶೋಧನಾ ವಿದ್ಯಾರ್ಥಿ ಸಾವು

ದೇವಸ್ಥಾನಕ್ಕೆ ಬರುವ ಪುರುಷರಿಗೆ ಧೋತಿ ಮತ್ತು ಶಲ್ಯ, ಹೆಂಗಸರಿಗೆ ಸೀರೆ ಅಥವಾ ಚೂಡಿದಾರ ಧರಿಸುವುದು ಕಡ್ಡಾಯ ಮಾಡಲಾಗಿದೆ. ಬರ್ಮುಡಾ ಪ್ಯಾಂಟ್, ಜೀನ್ಸ್ ಪ್ಯಾಂಟ್ ಧರಿಸಿ ಬಂದವರಿಗೆ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸಿ ಪರಿಷ್ಕೃತ ವಸ್ತ್ರಸಂಹಿತೆಯನ್ನು ಈಗಾಗಲೇ ಜಾರಿ ಮಾಡಲಾಗಿದೆ.