ತಾರಿಗುಳಿ: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ವತಿಯಿಂದ ಮಹಿಳೆಯರಿಗೆ ಕೊರೊನಾ ವೈರಸ್ ಜಾಗೃತಿ ಮತ್ತು ಕುಟುಂಬ ಯೋಜನೆಯಲ್ಲಿ ಸಿಗುವ ಸೌಲಭ್ಯ ಹಾಗೂ ಕುಟುಂಬ ಯೋಜನಾ ನಿಯಂತ್ರಣ ಕ್ರಮಗಳ ಕುರಿತಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಕೊರೊನಾ ವೈರಸ್‍ನ ಲಕ್ಷಣ ಮತ್ತು ತಡೆಗಟ್ಟುವ ಕ್ರಮಗಳ ಕುರಿತಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್‍ನ ವೈದ್ಯಾಧಿಕಾರಿಯಾದಂತಹ ಡಾ|| ಸನ್ಮತಿ ಹೆಗಡೆ ಮಾತನಾಡಿದರು. ಕುಟುಂಬ ಯೋಜನಾ ಸೌಲಭ್ಯದ ಕುರಿತಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್‍ನ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಮಾಹಿತಿ ನೀಡಿದರು.

RELATED ARTICLES  ಕೋವಿಡ್ ಹಿನ್ನೆಲೆ : ಕುಮಟಾ ಎರಡು ಕಾಲೇಜುಗಳಿಗೆ ರಜೆ ಘೋಷಣೆ.

ಶಾಶ್ವತ & ತಾತ್ಕಾಲಿಕ ಕುಟುಂಬ ಯೋಜನಾ ನಿಯಂತ್ರಣಾ ವಿಧಾನಗಳ ಕುರಿತಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಮ್ಯಾನೇಜರ್ ಆದ ಶ್ರೀಮತಿ ಸಂತಾನ್ ಲೂಯಿಸ್ ಮಾಹಿತಿ ನೀಡಿದರು.

RELATED ARTICLES  ಬಿಜೆಪಿ ವಿವಿಧ ಮೋರ್ಚಾ ಅಧ್ಯಕ್ಷರ ಆಯ್ಕೆ: ಜಗದೀಶ ಭಟ್ಟ, ವಿಶ್ವನಾಥ ನಾಯ್ಕ ಇನ್ನಿತರರ ಆಯ್ಕೆ.

ಆಶಾ ಕಾರ್ಯಕರ್ತೆಯಾದಂತಹ ಶೀಮತಿ ಲತಾ ಸ್ವಾಗತಿಸಿದರು. ಶ್ರೀಮತಿ ನಾಗವೇಣಿ ನಾಯ್ಕ ವಂದಿಸಿದರು. ಹಾಗೂ ಆಶಾ ಕಾರ್ಯಕರ್ತೆಯಾದಂತಹ ಶ್ರೀಮತಿ ರೇಖಾ ರವರು ಉಪಸ್ಥಿತರಿದ್ದರು.