ತನ್ನ ಆರ್ಭಟಕ್ಕೆ ಕಡಿವಾಣವೇ ಇಲ್ಲ ಎಂಬುದನ್ನು ಕೊರೋನಾ ಮತ್ತೊಮ್ಮೆ ಸಾಬೀತು ಪಡಿಸಿಸುವಂತೆ ತನ್ನ ಆರದಭಟ ನಡೆಸಿದೆ. ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಆರ್ಭಟವನ್ನು ಮುಂದುವರಿಸುತ್ತಾ ಸಾಗಿರುವ ಮಹಾಮಾರಿ ಜನತೆಯಲ್ಲಿ ಆತಂಕ ಮೂಡಿಸಿದೆ.

ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 28 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

ಅಳ್ವೆಕೊಡಿಯ 3 ವರ್ಷದ ಮಗು, 65 ವರ್ಷದ ಪುರುಷ, 34 ವರ್ಷದ ಪುರುಷ, 32 ವರ್ಷದ ಮಹಿಳೆ, ಕಲ್ವೆಯ 43 ವರ್ಷದ ಮಹಿಳೆ, ಹುಬ್ಬಣಗೇರಿಯ 70 ವರ್ಷದ ವೃದ್ಧ, ಕಲ್ಲಬ್ಬೆಯ 8 ವರ್ಷದ ಬಾಲಕ, 57 ವರ್ಷದ ಬಾಲಕ, ಹೆಬೈಲ್‌ನ 33 ವರ್ಷದ ಮಹಿಳೆ, 8 ವರ್ಷದ ಬಾಲಕ, ಕತಗಾಲ್‌ನ 65 ವರ್ಷದ ಮಹಿಳೆ,ಬೆತಗೇರಿಯ 29 ವರ್ಷದ ಯುವಕ, ಕೋಟಿತಿರ್ಥದ 67 ವರ್ಷದ ವೃದ್ಧ, ಬಂಡಿಕೇರಿಯ 72 ವರ್ಷದ ವೃದ್ಧ, ಮಣ್ಕಿಯ 73 ವರ್ಷದ ವೃದ್ಧ, 36 ವರ್ಷದ ಮಹಿಳೆ, ಕುಮಟಾದ 47 ವರ್ಷದ ಪುರುಷ, ಗೋಕರ್ಣದ 50 ವರ್ಷದ ಮಹಿಳೆ, 55 ವರ್ಷದ ಪುರುಷ,ತಲಗೋಡ್‌ನ 6 ವರ್ಷದ ಬಾಲಕ, 60 ವರ್ಷದ ಮಹಿಳೆ, ಬರ್ಗಿಯ 54 ವರ್ಷದ ಮಹಿಳೆ, ಹೆಗಡೆಯ 29 ವರ್ಷದ ಯುವತಿ, ಹಂದಿಗೋಣದ 8 ವರ್ಷದ ಬಾಲಕ, 39 ವರ್ಷದ ಮಹಿಳೆ, ಹಣ್ಣೆಮಠದ 55 ವರ್ಷದ ಮಹಿಳೆ, ಗೋಕರ್ಣದ 12 ವರ್ಷದ ಬಾಲಕ, 65 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

RELATED ARTICLES  ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕ ವಿಶ್ವೇಶ್ವರ ಭಟ್ಟರ ಸುಳಿವಿಲ್ಲ: ಪೋಲೀಸರಿಂದ ‌ನಡೆಯುತ್ತಲಿದೆ ಹುಡುಕುವ ಕಾರ್ಯ!

ತಾಲೂಕಿನ ಅಳ್ವೆಕೋಡಿ, ಗೋಕರ್ಣ, ಹಂದಿಗೋಣ , ಹೆಬೈಲ್ , ತಲಗೋಡ , ಕಲ್ಲಬ್ಬೆ, ಹುಬ್ಬಣಗೇರಿ, ಕತಗಾಲ್, ಹಣ್ಣೆಮಠ, ಹೆಗಡೆ, ಬೆಟ್ಗೇರಿ, ಕೋಟಿತೀರ್ಥ, ಮಣ್ಕಿ, ಮುಂತಾದ ಬಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಹೊನ್ನಾವರದಲ್ಲಿಯೂ ಮುಂದುವರಿದ ಆರ್ಭಟ.

ಎಡಬಿಡದೆ ಕಾಡುತ್ತಿರುವ ಕರೋನಾ ಇಂದು ಹೊನ್ನಾವರ ತಾಲೂಕಿನ ಜನರು ನಿದ್ದೆಗೆಡುವಂತೆ ಮಾಡಿದೆ.

ಪೋಲಿಸ್ ಠಾಣೆಯ 48 ವರ್ಷದ ಮಹಿಳೆ, 54 ವರ್ಷದ ಪುರುಷ, ಕೆ ಎಚ್ ಬಿ ಕಾಲೋನಿಯ 57 ವರ್ಷದ ಪುರುಷ, ಗ್ರಾಮೀಣ ಭಾಗವಾದ ಕರ್ಕಿಯ 37 ವರ್ಷದ ಪುರುಷ, 45 ವರ್ಷದ ಪುರುಷ,
ಉದ್ಯಮ ನಗರದ 23 ವರ್ಷದ ಯುವಕ, 29 ವರ್ಷದ ಯುವತಿ, ರಾಯಲಕೇರಿಯ 51 ವರ್ಷದ ಪುರುಷ, ಹೊನ್ನಾವರ ಪಟ್ಟಣದ ಲಕ್ಷ್ಮೀ ನಾರಾಯಣನಗರದ 31 ವರ್ಷದ ಯುವಕ, ಕಸಬಾ ಗುಂಡಿಬೈಲನ 29 ವರ್ಷದ ಯುವತಿ, ಖಾಸಗಿ ಆಸ್ಪತ್ರೆಯ ಸಿಬ್ಬಂದಿ 55 ವರ್ಷದ ಪುರುಷ, ಪಟ್ಟಣ ಪಂಚಾಯತ್‌ನ 18 ವರ್ಷದ ಯುವಕ, 24 ವರ್ಷದ ಯುವಕ, ಪ್ರಭಾತನಗರದ 55 ವರ್ಷದ ಪುರುಷ, 50 ವರ್ಷದ ಮಹಿಳೆ, 16 ವರ್ಷದ ಬಾಲಕಿ,ಗುಣವಂತೆಯ 68 ವರ್ಷದ ಮಹಿಳೆ, ಇಡಗುಂಜಿಯ 47 ವರ್ಷದ ಪುರುಷ, ಹಡಿನಬಾಳ ಮಸ್ಕಲಮಕ್ಕಿಯ 62 ವರ್ಷದ ಮಹಿಳೆ., ನಾಥಗೇರಿಯ 30 ವರ್ಷದ ಯುವಕ, 60 ವರ್ಷದ ಪುರುಷ, ಉಪ್ಪೋಣಿಯ 31 ವರ್ಷದ ಯುವತಿ, ಗೇರುಸೋಪ್ಪಾದ 24 ವರ್ಷದ ಪುರುಷ, ಕುಮಟಾ ಹಳಕಾರದ 35 ವರ್ಷದ ಮಹಿಳೆ, 21 ವರ್ಷದ ಯುವತಿ, 8 ವರ್ಷದ ಬಾಲಕಿ, ಅಗ್ರಹಾರದ 42 ವರ್ಷದ ಪುರುಷ, ಹಳದೀಪುರದ 52 ವರ್ಷದ ಪುರುಷ, ಕಡತೋಕಾದ 70 ವರ್ಷದ ಪುರುಷ, 54 ವರ್ಷದ ಪುರುಷ, ಹೊಸಾಕುಳಿಯ 38 ವರ್ಷದ ಮಹಿಳೆ, 17 ವರ್ಷದ ಬಾಲಕಿ, 21 ವರ್ಷದ ಯುವತಿ, ಕಾಸರಕೋಡ ಟೋಂಕಾದ 30 ವರ್ಷದ ಯುವಕ, ಹೊಸಪಟ್ಟಣದ 44 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 103 ಜನರಲ್ಲಿ ಕೊರೋನಾ ಪಾಸಿಟಿವ್ : ಒಂದು ಸಾವು

ಇಂದು ಒಟ್ಟು 36 ಜನರಲ್ಲಿ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1010 ಕ್ಕೆ ತಲುಪಿದೆ.
ಇಂದು ಪಟ್ಟಣ ಭಾಗದಲ್ಲಿ 15, ಗ್ರಾಮೀಣ ಭಾಗದಲ್ಲಿ 18 ಕೇಸ್ ಸೇರಿದಂತೆ ಒಟ್ಟು 36 ಜನರಲ್ಲಿ ಸೋಂಕು ಪತ್ತೆಯಾಗಿದೆ.