ಕುಮಟಾದ ಹೆಸರಾಂತ ಅಡಿಕೆ ದಲಾಲರಾದ ದಿವಂಗತ ಗಣೇಶ ಪರಮೇಶ್ವರ ಭಟ್ ಇವರ ಸಹೋದರ ನಾರಾಯಣ ಪರಮೇಶ್ವರ ಭಟ್ ಹಂದಿಗೋಣ ಇವರು ಅ.2ರಂದು ರಾತ್ರಿ ನಿಧನ ಹೊಂದಿದರು.
ಇವರಿಗೆ 88 ವರ್ಷಗಳಾಗಿತ್ತು.ವಯೋಸಹಜದಿಂದ ಹಾಗೂ ಅಲ್ಪ ಅನಾರೋಗ್ಯದಿಂದ ನಿಧನಹೊಂದಿದ ನಾರಾಯನ ಭಟ್ ಇವರು ಮೆ||ಗಣೇಶ ಪರಮೇಶ್ವರ ಭಟ್ ಹಂದಿಗೋಣ ಎಂಬ ಅಡಿಕೆದಲಾಲಿ ಮಂಡಿಯಲ್ಲಿ ಪಾಲುದಾರರಾಗಿ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು.
ತಮ್ಮ ಪ್ರಾಮಾಣಿಕತೆ ಹಾಗೂ ನಿಷ್ಕಳಂಕ ಮನಸ್ಸಿನಿಂದ ಅನೇಕರ ಮನಗೆದ್ದಿದ್ದರು.ಅಡಿಕೆ ವ್ಯಾಪಾರಸ್ಥರ,ದಲಾಲರು,ಹಾಗೂ ರೈತರ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದ ಇವರು ಸದಾಕಾಲ ರೈತರ ಏಳಿಗೆ ಕುರಿತು ಹಂಬಲಿಸುತ್ತಿದ್ದರು ಇವರ ನಿಧನಕ್ಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುರುಳಿದರ ವೈ ಪ್ರಭು,ದಲಾಲರ ಸಂಘದ ಅದ್ಯಕ್ಷ ಪ್ರಕಾಶ ಭಟ್ ಹಾಗೂ ದಲಾಲರು ವ್ಯಾಪಾರಸ್ಥರು,ಪೇಟೆ ಕಾರ್ಯಕರ್ತರು ಮತ್ತು ಅನೇಕ ರೈತರು ಕಂಬನಿ ಮಿಡಿದು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಕೋರಿದ್ದಾರೆ.