ಕುಮಟ : ನೆಲ್ಲೆಕೇರಿಯ ಬಸ್ಸ ನಿಲ್ದಾಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇವರು ಪ್ರತಿಷ್ಠಾಪಿಸಿದ 5.ನೇ ವರ್ಷದ ಗಣಪತಿ ವಿಸರ್ಜನೆ ಇಂದು ಅದ್ದೂರಿಯಾಗಿ ಆಚರಿಸಲಾಯಿತು.

ನೆಲ್ಲೆಕೇರಿಯಲ್ಲಿಬಸ್ಸ ನಿಲ್ದಾಣದಲ್ಲಿ ಐದುದಿನಗಳ ಕಾಲ ಚೌತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಲಾಯಿತು. ಐದನೇ ದಿನವಾದ ಇಂದು ವಿಸರ್ಜನಾ ಪೂಜೆ ಮುಗಿಸಿ ಅದ್ದೂರಿ ಮೆರವಣಿಗೆ ಮೂಲಕ ಬಸ್ತಿಪೇಟೆ ಮಾರ್ಗದಲ್ಲಿ ವಿವಿಧ ಸಾಂಸ್ಕೃತಿಕ ಮನರಂಜನೆಯೊಂದಿಗೆ ಮೆರೆವಣಿಗೆ ನಡೆಸಲಾಯಿತು.

RELATED ARTICLES  ಫೆಸ್ ಬುಕ್ ಸ್ನೇಹ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಳು.

ಮೆರವಣಿಗೆಯ ಉದ್ದಕ್ಕೂ ಯುವಕರಿಂದ ಛದ್ಮವೇಶ.ಡೊಳ್ಳುಕುಣಿತ ಮೊದಲಾದ ವೇಷಭೂಷಣ ನೋಡುಗರನ್ನು ಆಕರ್ಷಿಸುವಂತೆ ಮಾಡಿತು. ವಿಸರ್ಜನೆ ವೇಳೆ ವರುಣನ ಆರ್ಭಟ ಸ್ವಲ್ಪ ಮೆರೆವಣಿಗೆಗೆ ಕಿರಿಕ್ ನೀಡಿರುವುದನ್ನು ಬಿಟ್ಟರೆ ಉಳಿದಂತೆ ಎಲ್ಲವೂ ಶಾಂತಿಯುತ ವಾಗಿ ನಡೆಯಿತು.

RELATED ARTICLES  ಸಾಧನೆ ಮಾಡಿದ ವಿಂದ್ಯಾ ದ್ವಯರು : ಅಭಿನಂದನೆಗಳು