ಕಾರವಾರ : ಕಾಡಿನಿಂದ ಓಡಿಬಂದ ಕಡವೆಯೊಂದು ಆಯತಪ್ಪಿ ಗುಡ್ಡದಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಸಂಕ್ರುಭಾಗದಲ್ಲಿ ಮಂಗಳವಾರ ನಡೆದಿದೆ.

ಸುಮಾರು ಎರಡು ವರ್ಷ ಪ್ರಾಯದ ಈ ಹೆಣ್ಣು ಕಡವೆಯು ಅನ್ಯ ಪ್ರಾಣಿಯೊಂದು ಅಟ್ಟಿಸಿಕೊಂಡು ಬಂದ ಪರಿಣಾಮ ವೇಗವಾಗಿ ಬಂದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಐಆರ್ಬಿ ಕಂಪೆನಿಯವರು ತೆರವುಗೊಳಿಸಿದ್ದ ಕಂದಕದಲ್ಲಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳೀಸಿದ್ದರು. ಆದರೆ ಕಡವೆ ಅಷ್ಟರಲ್ಲಾಗಲೆ ಮೃತಪಟ್ಟಿತ್ತು. ಕೊನೆಗೆ ಪಶುವೈದ್ಯಾಧಿಕಾರಿ ಡಾ. ಮಂಜಪ್ಪ ಅವರನ್ನು ಕರೆಸಿ ಪಂಚನಾಮೆ ನಡೆಸಲಾಯಿತು ಎಂದು ಎಸಿಎಫ್ ಮಂಜುನಾಥ ನಾವಿ ತಿಳಿಸಿದರು.

RELATED ARTICLES  ಲಾಯನ್ಸ್ ಕ್ಲಬ್ ನಿಂದ ವಾಟರ್ ಫಿಲ್ಟರ್ ಕೊಡುಗೆ

ಅಗ್ರಾ, ಸಂಕ್ರುಭಾಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿಗೆ ಕಡವೆಗಳು ಹೆಚ್ಚಾಗಿ ಕಂಡುಬರುತಿವೆ. ಈ ಕಡವೆಯನ್ನು ಕಾಡು ಪ್ರಾಣಿ ಇಲ್ಲವೆ ನಾಯಿಗಳು ಅಟ್ಟಿಸಿಕೊಂಡು ಬಂದು ಮೃತಪಟ್ಟಿರುವಂತೆ ಕಂಡುಬರುತ್ತಿದೆ ಈಗಾಗಲೇ ಪಂಚನಾಮೆ ನಡೆಸಿದ್ದು, ಅದನ್ನು ಅದೇ ಸ್ಥಳದಲ್ಲಿ ಸುಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿದ್ದಂದಿಗಳೂ ಉಪಸ್ಥಿತರಿದ್ದರು.

RELATED ARTICLES  ಸಿ.ಎ ಪರೀಕ್ಷೆಯಲ್ಲಿ ಗಣಪತಿ ಹೆಗಡೆ ಸಾಧನೆ