ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 208 ಜನರಿಗೆ ಕರೋನಾ ಪಾಸಿಟಿವ್ ಬಂದಿರುವ ಬಗ್ಗೆ ಜಿಲ್ಲಾಡಳಿತದ ಹೆಲ್ತ ಬುಲೆಟಿನ್ ವರದಿ ಮಾಡಿದೆ.
ಕಾರವಾರ 38, ಅಂಕೋಲಾ 12, ಕುಮಟಾ 45, ಹೊನ್ನಾವರ 12, ಭಟ್ಕಳ 26, ಶಿರಸಿ 39, ಸಿದ್ದಾಪುರ 8, ಯಲ್ಲಾಪುರ 22, ಮುಂಡಗೋಡ 10, ಹಳಿಯಾಳ 16 ಸೋಂಕಿತ ಪ್ರಕರಣ ದಾಖಲಾಗಿದೆ.
1159 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 895 ಜನ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಇಂದು ಕರೋನಾಕ್ಕೆ ಮೂರು ಜನ ಬಲಿಯಾಗಿದ್ದು 129 ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಕುಮಟಾ ,ಭಟ್ಕಳ, ಹಾಗೂ ಹಳಿಯಾಳದಲ್ಲಿ ಒಂದೊಂದು ಸಾವು ಸಂಭವಿಸಿದೆ.
ಜಿಲ್ಲೆಯಲ್ಲಿ ಇಂದು 300 ಜನ ಗುಣಮುಖರಾಗಿ ಬಿಡುಗಡೆ ಆಗಿದ್ದು 8797 ಜನ ಈವರೆಗೆ ಗುಣಮುಖರಾಗಿದ್ದು 10980 ಜನ ಈವರೆಗೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರಾಗಿದ್ದಾರೆ.