ಕುಮಟಾ: ದಿನೇ ದಿನೇ ಹೆಚ್ಚುತ್ತಿರುವ ಕರೋನಾ ಪ್ರಕರಣ ಇಂದು ಕೂಡ ಕುಮಟಾದಲ್ಲಿ ಭಾರಿ ಸದ್ದು ಮಾಡಿದೆ. ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಎಗ್ಗಿಲ್ಲದೆ ಹರಡುತ್ತಿರುವ ಸೋಂಕು ಕಬಂಧಬಾಹುವಿನ ಮೂಲಕ ಅನೇಕ ಜನರನ್ನು ಸೇರಿಸಿಕೊಳ್ಳುತ್ತಿದೆ. ಇಂದು ತಾಲೂಕಿನಲ್ಲಿ 46 ಪ್ರಕರಣ ದಾಖಲಾಗಿದೆ.
ದಿವಗಿಯ 28 ವರ್ಷದ ಯುವಕ, ತಾರಮಕ್ಕಿಯ 26 ವರ್ಷದ ಇಬ್ಬರು ಯುವಕರು, ಕೋಟಿತೀರ್ಥದ 51 ವರ್ಷದ ಮಹಿಳೆ, ಮೂಡಂಗಿಯ 59 ವರ್ಷದ ಪುರುಷ, ಹೆಗಡೆಯ 25 ವರ್ಷದ ಯುವಕ, ಹಳಕಾರ ಜನತಾ ಪ್ಲಾಟ್‌ನ 34 ವರ್ಷದ ಪುರುಷ, 39 ವರ್ಷದ ಪುರುಷ, 23 ವರ್ಷದ ಮಹಿಳೆ, 4 ವರ್ಷದ ಬಾಲಕ, ಬಾಡದ 50 ವರ್ಷದ ಪುರುಷ,ಅಘನಾಶಿನಿಯ 55 ವರ್ಷದ ಮಹಿಳೆ, ಬರ್ಗಿಯ 65 ವರ್ಷದ ಮಹಿಳೆ, 36 ವರ್ಷದ ಮಹಿಳೆ, 33 ವರ್ಷದ ಪುರುಷ, 30 ವರ್ಷದ ಮಹಿಳೆ, ಗುಡೆಅಂಗಡಿಯ 68 ವರ್ಷದ ವೃದ್ಧೆ,
ಮೂರೂರಿನ 53 ವರ್ಷದ ಪುರುಷ, 22 ವರ್ಷದ ಪುರುಷ, ಹೆರವಟ್ಟಾದ 70 ವರ್ಷದ ವೃದ್ದೆ, 19 ವರ್ಷದ ಯುವಕ, 24 ವರ್ಷದ ಪುರುಷ, 43 ವರ್ಷದ ಮಹಿಳೆ, ಮಾಸೂರಿನ 32 ವರ್ಷದ ಮಹಿಳೆ, ಬಂಕಿಕೊಡ್ಲದ 30 ವರ್ಷದ ಪುರುಷ, 45 ವರ್ಷದ ಪುರುಷ, 37 ವರ್ಷದ ಮಹಿಳೆ, 40 ವರ್ಷದ ಮಹಿಳೆ, 18 ವರ್ಷದ ಯುವಕ, ಮಿರ್ಜಾನಿನ 70 ವರ್ಷದ ವೃದ್ದೆ, 40 ವರ್ಷದ ಮಹಿಳೆ, ವಿವೇಕನಗರದ 60 ವರ್ಷದ ವೃದ್ಧ, ಬಲ್ಲಾಳಮಕ್ಕಿಯ 21 ವರ್ಷದ ಯುವಕ, 19 ವರ್ಷದ ಯುವಕಗೆ ಸೋಂಕು ದೃಢಪಟ್ಟಿದೆ.
ಕುಮಟಾದ 20 ವರ್ಷದ ಪುರುಷ, 21 ವರ್ಷದ ಯುವತಿ, 38 ವರ್ಷದ ಮಹಿಳೆ, 5 ವರ್ಷದ ಬಾಲಕಿ, 39 ವರ್ಷದ ಪುರುಷ, 41 ವರ್ಷದ ಮಹಿಳೆ, 16 ವರ್ಷದ ಯುವತಿ, 34 ವರ್ಷದ ಮಹಿಳೆ, ಕಿಮಾನಿಯ 65 ವರ್ಷದ ಮಹಿಳೆ, ಬಗ್ಗೋಣದ 50 ವರ್ಷದ ಪುರುಷ
ಕತಗಾಲ್‌ನ 52 ವರ್ಷದ ಪುರುಷ, ಹಳೆ ಮೀನುಮಾರುಕಟ್ಟೆಯ 45 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ದೀವಗಿ, ತಾರಮಕ್ಕಿ, ಮೂಡಂಗಿ, ಹೆಗಡೆ, ಅಘನಾಶಿನಿ, ತಾಲೂಕಿನ ಮೂರೂರು, ಮಾಸೂರು, ಬಂಕಿಕೊಡ್ಲ, ಮಿರ್ಜಾನ, ಬಗ್ಗೋಣ, ಹೆರವಟ್ಟಾ, ಬರ್ಗಿ, ಬಾಡಾ, ಗುಡೆಅಂಗಡಿ ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ.