ಪುರಸಭೆ ಸ್ವತ್ತಿನ ಎಲ್ಲಾ 60 ಅಂಗಡಿಕಾರಿಗೆ ಮತ್ತು ಅಂಗಡಿ ಕೆಲಸಗಾರರಿಗೆ ಕರೋನಾ ಪರೀಕ್ಷೆ ಕಡ್ಡಾಯ.
ನಿರಾಕರಿಸಿದ್ದಲ್ಲಿ ಅಂಗಡಿ ಬಂದ್ ಹಾಗೂ ಕಾನೂನು ಕ್ರಮ
ಕುಮಟಾ ತಾಲೂಕಿನಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣದಿಂದಾಗಿ ಇದನ್ನು ತಾಲೂಕ ಆಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಕಾರಣದಿಂದ ಮೊದಲ ಹಂತದಲ್ಲಿ ಕುಮಟಾ ಪಟ್ಟಣದಲ್ಲಿನ ಎಲ್ಲಾ ತರಕಾರಿ/ಹಣ್ಣಿನ/ಚಿಕನ್/ಮಟನ್/ ಬೀದಿ ಬದಿ ಅಂಗಡಿ ಹಾಗೂ ಪುರಸಭೆ ಸ್ವತ್ತಿನ ಎಲ್ಲಾ 60 ಅಂಗಡಿಕಾರಿಗೆ ಮತ್ತು ಇವರುಗಳ ಎಲ್ಲಾ ಅಂಗಡಿ ಕೆಲಸಗಾರರಿಗೆ ಕರೋನಾ ಪರೀಕ್ಷೆ ಕಡ್ಡಾಯಗೊಳಿಸಿದೆ. ಕಾರಣ ಇವರುಗಳೆಲ್ಲ ತಾಲೂಕಾ ಆಸ್ಪತ್ರೆಗೆ ತೆರಳಿ ಇಂದಿನಿಂದಲೇ ಕರೋನಾ ಪರೀಕ್ಷೆ ಮಾಡಿಕೊಳ್ಳಲೇ ಬೇಕಾಗಿರುತ್ತದೆ.
ದಿನಾಂಕ : 12-10-2020 ರಿಂದ ಬೆಳಿಗ್ಗೆ 10:30 ರ ನಂತರ ಮಧ್ಯಾನ 12:30 ರವರೆಗೆ ಪುರಸಭೆ ಕಛೇರಿ ಮುಂಭಾಗದಲ್ಲಿಯೂ ಕೂಡ ಕರೋನಾ ಪರೀಕ್ಷೆ ಮಾಡಿಸಿಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪರೀಕ್ಷಿಸಿಕೊಂಡವರು ಆಸ್ಪತ್ರೆಯ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲನೆ ಸಂದರ್ಭದಲ್ಲಿ ತೋರಿಸತಕ್ಕದ್ದು. ಸೂಚಿಸಿದಂತೆ ಮೇಲ್ಕಂಡ ವ್ಯಾಪಾರಸ್ಥರು ಮತ್ತು ಇವರುಗಳ ಅಂಗಡಿ ಕೆಲಸಗಾರರು ನಿರಾಕರಿಸಿದ್ದಲ್ಲಿ ಸದರಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಹಾಗೂ ಇವರುಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ ಕೆ ಸುರೇಶ್ ತಿಳಿಯಪಡಿಸಿದ್ದಾರೆ.