ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 115 ಜನರಿಗೆ ಕರೋನಾ ಪಾಸಿಟಿವ್ ಬಂದಿರುವ ಬಗ್ಗೆ ಜಿಲ್ಲಾಡಳಿತದ ಅಧಿಕೃತ ಹೆಲ್ತ ಬುಲೆಟಿನ್ ಮೂಲಕ ವರದಿಯಾಗಿದೆ.
ಕಾರವಾರ-11,ಅಂಕೋಲ-2,ಕುಮಟಾ-55, ಶಿರಸಿ-1,ಸಿದ್ದಾಪುರ-7,ಯಲ್ಲಾಪುರ-1,ಹಳಿಯಾಳ-37,ಜೋಯಿಡಾ-1 ಪಾಸಿಟಿವ್ ಬಂದಿರುವ ಬಗ್ಗೆ ವರದಿಯಾಗಿದೆ.
ಇಂದು ಮೂರು ಜನರ ಸಾವಿನೊಂದಿಗೆ ಸಾವಿನ ಒಟ್ಟೂ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಕುಮಟಾ ಯಲ್ಲಾಪುರ ಮುಂಡಗೋಡಿನಲ್ಲಿ ತಲಾ ಒಂದೊಂದು ಸಾವಾಗಿದೆ.
ಇಂದು ಭಟ್ಕಳ,ಹೊನ್ನಾವರ, ಮುಂಡಗೋಡಿನಲ್ಲಿ ಯಾವುದೇ ಪಾಸಿಟಿವ್ ವರದಿಯಾಗಿಲ್ಲ. ಕಾರವಾರ-30,ಅಂಕೋಲ-26,ಕುಮಟಾ-63, ಹೊನ್ನಾವರ 115, ಭಟ್ಕಳ 40, ಶಿರಸಿ-175, ಸಿದ್ದಾಪುರ-17, ಯಲ್ಲಾಪುರ-44,ಮುಂಡಗೋಡ-74, ಹಳಿಯಾಳ -65 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1197 ಜನರು ಕರೋನಾ ಪಾಸಿಟಿವ್ ಬಂದಿದ್ದು ಇಂದು 649 ಜನ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು ,575 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 790 ಜನ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.