ಕಾರವಾರ : ಜಮೀನು ನೀಡುವಂತೆ ವ್ಯಕ್ತಿಯೋರ್ವ ಜೀವ ಬೆದರಿಕೆ ಒಡ್ಡುತ್ತಿದ್ದು, ನಮಗೆ ರಕ್ಷಣೆ ನೀಡಬೇಕು ಎಂದು ಮಹಿಳೆಯೋರ್ವಳು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

ಪತಿಯನ್ನು ಕಳೆದುಕೊಂಡ ಬಳಿಕ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಅಂಕೋಲಾ ತಾಲೂಕಿನ ಬ್ರಹ್ಮೂರಿನ ಗಾಯತ್ರಿ ಮಹಾಬಲೇಶ್ವ ಭಟ್ಟ ಎಂಬ ಮಹಿಳೆಯೇ ಮನವಿ ಸಲ್ಲಿಸಿದವರು.
ಉರಿನವರೇ ಆದ ಶಿವರಾಮ ಬೊಬ್ಬು ಪಟಗಾರ ಎಂಬುವವರು ಜಮೀನಿನ ವಿಷಯವಾಗಿ ತಮ್ಮ ಕುಟುಂಬಕ್ಕೆ ನಿರಂತರವಾಗಿ ತೊಂದರೆ ನೀಡುತ್ತಿದ್ದಾರೆ. ತಮ್ಮ ಜಮೀನನ್ನು ಕಬಳಿಸಲು ಹಲವು ಬಾರಿ ಪ್ರಯತ್ನಿಸಿದ್ದನ್ನು ತಾನು ವಿಫಲಗೊಳಿಸಿದ್ದೇನೆ. ಆದರೆ ಇದೀಗ ರಾಜಕೀಯ ಪ್ರಭಾವ ಬಳಸಿಕೊಂಡು ಮತ್ತೆ ಕ್ಯಾತೆ ತೆಗೆಯುತಿದ್ದು, ಜೂ.೬ ರಂದು ಮನೆಗೆ ಬಂದು ತನ್ನ ಮೇಲೆ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಪೊಲೀಸರು ಆತನನ್ನು ಬಂಧಿಸಿರಲಿಲ್ಲ. ಬಳಿಕ ಆತನಿಗೆ ಜಾಮೀನು ದೊರೆತಿತ್ತು ಎಂದು ಆರೋಪಿಸಿದ್ದಾರೆ.
ಈಗ ಪುನಃ ತನ್ನ ಕೃತ್ಯವನ್ನು ಮುಂದುವರಿಸಿದ್ದು, ಕಳೆದ ಮೂರು ದಿನಗಳ ಹಿಂದೆ ಮಗಳನ್ನು ಬಲತ್ಕರಿಸಿ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈಗಾಗಲೇ ಹಲವು ಭಾರಿ ಪೊಲೀಸ್ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಮಗಳು ಪ್ರತಿನಿತ್ಯ ಕಾಲೇಜಿಗೆ ತೆರಳುವುದರಿಂದ ಯಾವುದಾದರು ಸಮಯದಲ್ಲಿ ತೊಂದರೆ ಮಾಡುವ ಆತಂಕ ಎದುರಾಗಿದೆ. ಕೂಡಲೇ ಆತನಿಂದ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

RELATED ARTICLES  ಕುಮಟಾ ಮಾನೀರ್ ಸಮೀಪ ಅಪಘಾತ: ಬೈಕ್ ಸವಾರ ಕುಂದಾಪುರ ಆಸ್ಪತ್ರೆಗೆ ದಾಖಲು