ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 109 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 162 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಅತೀ ಹೆಚ್ಚು ಪ್ರಕರಣ ಜೋಯಿಡಾದಲ್ಲಿ 25, ಇನ್ನುಳಿದಂತೆ ಕಾರವಾರದಲ್ಲಿ 6, ಅಂಕೋಲಾದಲ್ಲಿ 10, ಕುಮಟಾದಲ್ಲಿ 9, ಹೊನ್ನಾವರದಲ್ಲಿ 4, ಶಿರಸಿಯಲ್ಲಿ 11, ಸಿದ್ದಾಪುರ 22, ಮುಂಡಗೋಡಿನಲ್ಲಿ 4, ಹಾಗೂ ಹಳಿಯಾಳದ 18 ಮಂದಿಯಲ್ಲಿ ಸೋಂಕು ದೃಢವಾಗಿದೆ.
ಇಂದು ಒಟ್ಟೂ 162 ಮಂದಿ ಗುಣಮುಖರಾಗಿದ್ದು, ಕಾರವಾರದಲ್ಲಿ 34, ಅಂಕೋಲಾದಲ್ಲಿ 1, ಕುಮಟಾ 66, ಹೊನ್ನಾವರದಲ್ಲಿ 7, ಭಟ್ಕಳ 10, ಶಿರಸಿ 29, ಸಿದ್ದಾಪುರ 14, ಜೋಯಿಡಾದ ಓರ್ವ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಇಂದು ಯಲ್ಲಾಪುರ, ಹೊನ್ನಾವರ ಮತ್ತು ಕಾರವಾರದಲ್ಲಿ ಒರ್ವ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 138 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯ 11306 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈವರೆಗೆ 9859 ಮಂದಿ ಗುಣಮುಖರಾಗಿದ್ದಾರೆ. 523ಮಂದಿ ಆಸ್ಪತ್ರೆಯಲ್ಲಿ 777 ಮಂದಿ ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.