ಗೋಕರ್ಣ: ಗೋಕರ್ಣದ ಸೋಮೇಶ್ವರ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ದೇವಾಲಯದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳು ಕಳ್ಳತನ ಆಗಿರುವ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಬಾಗಿಲ ಬೀಗ ಮುರಿದು ಗರ್ಭಗುಡಿ ಪ್ರವೇಶಿಸಿದ ಕಳ್ಳರು ಬೆಳ್ಳಿಯ ಪೀಟ, ಬೆಳ್ಳಿಯ ದೇವರ ಪ್ರಭಾವಳಿ, ಶಿವನಮೂರ್ತಿ, ಬಂಗಾರದ ಲಾಕೇಟ್ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

RELATED ARTICLES  ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ ಆರೋಪ ; ಗ್ರಾ.ಪಂ ಗೆ ಬಿತ್ತು ಬೀಗ! ದಿಗ್ಬಂಧನಕ್ಕೆ ಒಳಗಾದ ಕಾರ್ಯದರ್ಶಿ ಹಾಗೂ ಪಿಡಿಒ

ಕುಮಟಾ ಸಿಪಿಐ ಪರಮೇಶ್ವರ ಗುನಗ ಮತ್ತು ಗೋಕರ್ಣ ಪಿಎಸ್‌ಐ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಸುಮಾರು ಮೂರುವರೆ ಲಕ್ಷ ಮೌಲ್ಯದ ಆಭರಣ ಕಳುವಾಗಿದೆ ಎಂಬ ಮಾಹಿತಿ ಲಭಿಸಿದೆ.

ಕಳೆದ ಅನೇಕ ದಿನಗಳಿಂದ ಉತ್ತರಕನ್ನಡದ ವಿವಿಧೆಡೆಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ ಪೊಲೀಸ್ ಇಲಾಖೆ ಕಳ್ಳರನ್ನು ಬಂಧಿಸಲು ಹರಸಾಹಸಪಡುತ್ತಿದೆ. ಉತ್ತರಕನ್ನಡದ ಜನರು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಎದುರಾಗಿದೆ.

RELATED ARTICLES  ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ.

ಎಲ್ಲ ಪ್ರಕರಣಗಳನ್ನು ಅತಿ ಶೀಘ್ರದಲ್ಲಿಯೇ ಭೇದಿಸಿ ಆರೋಪಿಗಳನ್ನು ಬಂಧಿಸುವ ಆಶಯವನ್ನು ಸ್ಥಳೀಯರು ಪೊಲೀಸ್ ಇಲಾಖೆ ಮೇಲೆ ವ್ಯಕ್ತಪಡಿಸಿದ್ದಾರೆ.