ಕಾರವಾರ : ಶಿರವಾಡದ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಪರಾಧ ಪತ್ತೆದಳ ದಾಳಿ ನಡೆಸಿ ಮೂವರನ್ನು ಬಂಧಿಸಿ 20 ಸಾವಿರ ರೂ. ಮೌಲ್ಯದ 1.40 ಕೆಜಿ ಗಾಂಜಾವನ್ನು ಮತ್ತು ಕಳ್ಳಸಾಗಾಣಿಕೆಗೆ ಬಳಸಲಾದ ಕಾರು, ಬೈಕ್ ಮತ್ತು ಮೊಬೈಲ್‌ನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

RELATED ARTICLES  ಹಿಂದೂಗಳ ಮೇಲೆ ಹಾಡು ಹಗಲೇ ಕೇರಳ ಸರ್ಕಾರವು ಅತ್ಯಾಚಾರ ನಡೆಸಿದೆ: ಅನಂತ್ ಕುಮಾರ್ ಹೆಗಡೆ

ಬಂಧಿತರನ್ನು ತಾಲೂಕಿನ ಶಿರವಾಡದ ಬಂಗಾರಪ್ಪನಗರದ ನಿವಾಸಿ ಕಿಶನ ಮೋಹನ ಬಾಂದೇಕರ , ಗೋಹಿಲ್ ಗಣೇಶ ಬೈರೆಲಿ, ಕಾಣಕೋಣದ ನಿವಾಸಿಯಾದ ಗಂಗೇಶ ಗಜಾನನ ಪಾಥರಪೆಕರ ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ ಠಾಣೆಯ ಪೊಲೀಸ ಸಿಬ್ಬಂದಿಯಾದ ಉಮೆಶ ನಾಯ್ಕ, ಶಿವಾನಂದ ತಾನಸಿ, ಶರತಕುಮಾರ ಬಿ.ಎಸ್, ನಾರಾಯಣ ಎಮ್.ಎಸ್ ಮುಂತಾದವರು ಇದ್ದರು.

RELATED ARTICLES  ಹಿಂದೂ ಹೋರಾಟಗಾರರನ್ನು ಧಮನ ಮಾಡುವ ತಂತ್ರ : ಕುಮಟಾದಲ್ಲಿ ನಡೆಯಿತು ಪ್ರತಿಭಟನೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ ಬೆಳೆಕಿಗೆ ಬರುತ್ತಿದ್ದು ಈ ಜಾಲ ಭೇದಿಸಲು ಪೊಲೀಸ್ ಇಲಾಖೆ ಬಲೆ ಬೀಸಿದೆ.