ಕಾರವಾರ : ಉತ್ತರಕನ್ನಡ ಜಿಲ್ಲೆ, ದಕ್ಷಿಣಕನ್ನಡ, ಉಡುಪಿ ಸೇರಿ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಗುರುವಾರದ ತನಕ ಭಾರೀ ಮಳೆಯಾಗುವ ಸಾಧ್ಯೆತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಾಗಿದ್ದು ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಅಕ್ಟೋಬರ್ ಹದಿಮೂರು ರಿಂದ ಹದಿನೈದು ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ .
ದಕ್ಷಿಣ ಕನ್ನಡ , ಉಡುಪಿ , ಉತ್ತರ ಕನ್ನಡ , ಬಾಗಲಕೋಟೆ , ಬೀದರ್ , ಧಾರವಾಡ , ಕಲಬುರ್ಗಿ , ಕೊಪ್ಪಳ , ರಾಯಚೂರು , ವಿಜಯಪುರ , ಹಾವೇರಿ , ಯಾದಗಿರಿ ,ಜಿಲ್ಲೆಯಲ್ಲಿ ಗುರುವಾರ ತನಕ ಭಾರೀ ಮಳೆ ಸಾಧ್ಯತೆ ಇದ್ದು ಹೀಗಾಗಿ ಆರೆಂಜ್ ರೆಡ್ ಘೋಷಿಸಲಾಗಿದೆ.
ಬಾರೀ ಗಾಳಿ ಬೀಸುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದೆಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತುಮಕೂರು ಶಿವಮೊಗ್ಗ ಕೊಡಗು ಚಿತ್ರದುರ್ಗ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ಬಳ್ಳಾರಿ ಗದಗ ಬೆಳಗಾವಿ ಜಿಲ್ಲೆಗಳಲ್ಲಿ ಎಲ್ಲೋ ಆರ್ಟ್ ಘೋಷಣೆಯಾಗಿದೆ.