ಯಲ್ಲಾಪುರ: ಪಟ್ಟಣದಲ್ಲಿಂದು 14 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 63 ಕ್ಕೆ ತಲುಪಿದೆ.
ಮಂಗಳವಾರ ಮಾವಿನಕಟ್ಟಾದಲ್ಲಿ 4, ಮಂಜುನಾಥನಗರ ಹಾಗೂ ನೂತನ ನಗರಗಳಲ್ಲಿ ತಲಾ 3, ಕಂಚನಳ್ಳಿ, ಕಲ್ಲಳ್ಳಿ, ಉದ್ಯಮನಗರ ಹಾಗೂ ಗುಳ್ಳಾಪುರಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 728 ಕ್ಕೇರಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ ನೀಡಿದ್ದಾರೆ.