ಕುಮಟಾ : ಪ್ರತಿ ವರ್ಷದಂತೆ ಯಾಣದ ಗ್ರಾಮ ಅರಣ್ಯ ಸಮಿತಿಯಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹಾಗೂ ಪರಿಸರಕ್ಕೆ ಪೂರಕವಾಗುವಂತೆ ಗ್ರಾಮ ಅರಣ್ಯ ಸಮಿತಿಯಿಂದ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.ಸದರಿ ಅಭಿಯಾನದಲ್ಲಿ ಶ್ರೀ ಡಿ.ಬಿ.ಹರಿಕಂತ್ರ ಸುಗಮಗಾರರು ಕುಮಟಾ ಉಪವಿಭಾಗ ಕುಮಟಾದವರು ಅಭಿಯಾನದ ಕುರಿತು ಸದಸ್ಯರಿಗೆ ಮಾಹಿತಿಯನ್ನು ನೀಡಿದರು.
ಯಾಣದ ಅರಣ್ಯ ಮತ್ತು ಶಿಖರದ ಬಗ್ಗೆ ವಿವರಿಸಿದರು. ಪ್ರಕೃತಿಯ ಕೊಡುಗೆಯನ್ನು ನಾವೆಲ್ಲರೂ ಸುಸ್ಥಿರವಾಗಿ ಉಳಿಸಿಕೊಂಡು ಹೋಗುವುದು ಅನಿವಾರ್ಯವಾಗಿರುತ್ತದೆ. ಅರಣ್ಯ ಇಲಾಖೆಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಮತ್ತು ಹಸಿರು ಕರ್ನಾಟಕ ಯೋಜನೆ ಕುರಿತು ಮಾಹಿತಿ ನೀಡಿದರು. ಶ್ರೀ ದೀಪಯ್ಯ ನಾಯ್ಕ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು ಯಾಣದ ಸ್ವಚ್ಛತೆಯಲ್ಲಿ ಭಾಗವಹಿಸಿದ ಜನರಿಗೆ ಹಿತವಚನ ನೀಡಿದರು. ಶ್ರೀ ವಸಂತ ಗೌಡ ಉಪವಲಯ ಅರಣ್ಯಾಧಿಕಾರಿ ಸಂಡಳ್ಳಿ ಅವರು ಕಾರ್ಯಕ್ರಮವನ್ನು ಸಂಘಟಿಸಿ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ವರ್ಷಾವಾರು ಸ್ವಚ್ಛತಾ ಅಭಿಯಾನದ ಕುರಿತು ತಿಳುವಳಿಕೆ ನೀಡಿದರು.
ಅಭಿಯಾನದಲ್ಲಿ ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷರಾದ ಹೆರಂಬ ಹೆಗಡೆ ಅವರು ಊರ ನಾಗಿರಕರು ಅರಣ್ಯ ರಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದರು.