ಆನೇಕಲ್:  ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆನೇಕಲ್’ನ ೩ನೇ ಜಿಲ್ಲಾ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಬನ್ನೇರುಘಟ್ಟ ಪೊಲೀಸ್ ಠಾಣೆಯ ಕರಿಯಪ್ಪನ ಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಆರೋಪಿಗಳಾದ ಮೊಹನ್ ಕುಮಾರ್, ಹರೀಶ ಹಾಗೂ ಮುನಿರಾಜು ದೋಷಿಗಳು ಎಂದು ತೀರ್ಪು ನ್ಯಾಯಾಲಯ ನೀಡಿದೆ 2012 ರಲ್ಲಿ ನಡೆದ ಆಸ್ತಿ ವಿಚಾರದಲ್ಲಿ ರವಿಶಂಕರ್ ಎಂಬುವವರನ್ನು ಆತನ ಸಂಬಂಧಿ ಮೋಹನ್ ಕುಮಾರ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ.  ಕೊಲೆ ಸುಪಾರಿಯನ್ನು ಹರೀಶ್ ಮುನಿರಾಜ್ ಪಡೆದು ರವಿಶಂಕರ್’ನನ್ನು ಹತ್ಯೆಮಾಡಿದ್ದರು. ಈ ಸಂಬಂಧ ಈ ಮೂವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಪ್ರಕರಣದ ಪರ ಸರ್ಕಾರಿ ಅಭಿಯೋಜಕರಾದ ಗಣೇಶ್ ನಾಯಕ್ ರಿಂದ ವಾದ ಮಂಡನೆ ಮಾಡಿದ್ದರು.

RELATED ARTICLES  ಕಚ್ಚಿತು ಇರುವೆ ಹಾರಿತು ಪ್ರಾಣಪಕ್ಷಿ: ಕಾರವಾರದಲ್ಲೊಂದು ಮನ ಕಲಕುವ ಘಟನೆ!

ಪ್ರಕರಣವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ ನ್ಯಾಯಾಧೀಶರಾದ ಎಂ. ದೇವರಾಜ್ ಭಟ್ ಅವರು ತೀರ್ಪು ಪ್ರಕಟಿಸಿದ್ದಾರೆ.