ಹೊನ್ನಾವರ : ಉತ್ತರಕನ್ನಡದ ಜನತೆಯನ್ನು ಕಾಡುತ್ತಿರುವ ಕೊರೋನಾ ಹೊನ್ನಾವರ ಹಾಗೂ ಕುಮಟಾದಲ್ಲಿ ಇಂದೂ ಸಹ ಮುಂದುವರೆದಿದೆ.

ಹೊನ್ನಾವರ ತಾಲೂಕಿನಲ್ಲಿ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಹಬ್ಬುತ್ತಿರುವ ಕೊರೋನಾ ಕವಲಕ್ಕಿಯ 52 ವರ್ಷದ ಪುರುಷ, ಮಾಳಕೋಡಿನ 55 ವರ್ಷದ ಮಹಿಳೆ,ಸಾಲಕೋಡಿನ 40 ವರ್ಷದ ಪುರುಷ, 51 ವರ್ಷದ ಮಹಿಳೆ, ಕಾಸರಕೋಡಿನ 65 ವರ್ಷದ ಮಹಿಳೆ, 69 ವರ್ಷದ ಪುರುಷ, ಮೋಳ್ಕೋಡಿನ 27 ವರ್ಷದ ಯುವಕ,ಉದ್ಯಮ ನಗರದ 57 ವರ್ಷದ ಪುರುಷ, ರಾಯಲಕೇರಿಯ 58 ವರ್ಷದ ಪುರುಷ, ಬಾಂದೇಹಳ್ಳದ 32 ವರ್ಷದ ಯುವಕನಲ್ಲಿ ಕಾಣಿಸಿಕೊಂಡಿದೆ.
ತಾಲೂಕಿನಲ್ಲಿ ಇಂದು ಒಟ್ಟೂ 10 ಜನರಲ್ಲಿ ಕರೊನಾ ಪಾಸಿಟಿವ್ ಕಂಡುಬoದಿದೆ.

RELATED ARTICLES  ಮೊಬೈಲ್‍ಗಳು ಸದ್ಬಳಕೆಯಾಗಲಿ, ದುರ್ಬಳಕೆ ಬೇಡ : ವಿನಾಯಕ ಬ್ರಹ್ಮೂರು.

ಹೊನ್ನಾವರದ ಮಂಕಿಯಲ್ಲಿ ಒಂದು ಸಾವು

ಡಯಾಬಿಟಿಸ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಐದಾರು ದಿನದ ಹಿಂದೆ ಕರೊನಾ ದೃಢಪಟ್ಟಿದ್ದ ಮಂಕಿಯ 56 ವರ್ಷದ ಪುರುಷ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

 

ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 10 ಕರೊನಾ ಪಾಸಿಟಿವ್ 

RELATED ARTICLES  ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್

ಕುಮಟಾದ 27 ವರ್ಷದ ಯುವಕ, 74 ವರ್ಷದ ವೃದ್ಧ, 50 ವರ್ಷದ ಪುರುಷ, ಚಿತ್ರಗಿಯ 52 ವರ್ಷದ ಮಹಿಳೆ,
ಬೆಟ್ಕುಳಿಯ 43 ವರ್ಷದ ಪುರುಷ, ಗೋಕರ್ಣದ 55 ವರ್ಷದ ಮಹಿಳೆ, ಬಸ್ತಿಪೇಟೆಯ 52 ವರ್ಷದ ಪುರುಷ, ದಿವಳ್ಳಿಯ 78 ವರ್ಷದ ವೃದ್ಧೆ, ಮಾವಳ್ಳಿಯ 63 ವರ್ಷದ ಪುರುಷ, 70 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ.