ಕುಮಟಾ : ಕುಮಟಾದಲ್ಲಿ ಮಳೆಯ ಅಬ್ಬರ ಜಾಸ್ತಿಯಾಗಿದೆ. ಬುಧವಾರ ಸಂಜೆ ಸುರಿದ ಭಾರಿ ಗುಡುಗು ಸಹಿತ ಮಳೆಯಿಂದ ಪಟ್ಟಣದ ಹೆರವಟ್ಟಾದ ಶ್ರೀ ಸಾಣಿಅಮ್ಮ ದೇವಸ್ಥಾನದೊಳಕ್ಕೆ ಮಳೆ ನೀರು ತುಂಬಿಕೊoಡ ಘಟನೆ ವರದಿಯಾಗಿದೆ.

ಪಟ್ಟಣದ ಸಾಣಿ ಅಮ್ಮ ದೇವಸ್ಥಾನದ ಎದುರಿನ ರಸ್ತೆಯ ಇಕ್ಕೆಲಗಳಲ್ಲಿರುವ ಗದ್ದೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮನೆಗಳು ನಿರ್ಮಾಣವಾಗಿದ್ದರಿಂದ ಅಲ್ಲದೆ ರಸ್ತೆಗೆ ಸಮರ್ಪಕವಾದ ಗಟಾರ್ ವ್ಯವಸ್ಥೆ ಇಲ್ಲದ ಕಾರಣ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ದೀಪಾವಳಿ ಹಬ್ಬದ ಸಂಭ್ರಮ : ಮೈನವಿರೇಳಿಸುವ ಹೊಂಡೆ ಆಟ

ಮಳೆಯ ಅಬ್ಬರಕ್ಕೆ ದೇವಸ್ಥಾನದ ಗರ್ಭಗುಡಿಯವರೆಗೂ ನೀರು ತುಂಬಿಕೊoಡು ದೇವಿಯ ಪೂಜಾ ಕೈಕಂರ್ಯಗಳಿಗೆ ತೊಂದರೆಯಾಗಿದೆ. ಈಗಾಗಲೇ ಪುರಸಭೆಯ ಆ ಭಾಗದ ಸದಸ್ಯೆ ಶುಶೀಲಾ ನಾಯ್ಕ ಸೇರಿದಂತೆ ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ಅಗತ್ಯ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಒತ್ತಾಯವೂ ಕೇಳಿಬಂದಿದೆ.

RELATED ARTICLES  ಸಾಲದ ಬಾದೆ ತಾಳಲಾರದೆ ಆತ್ಮಹತ್ಯಗೆ ಶರಣಾದ ಶಿರಸಿಯ ರೈತ!