ಹೊನ್ನಾವರ : ಜನರ‌ ಜೀವನದ ಮೇಲೆಯೇ ಕರಿನೆರಳಾಗಿ ಚಾಚಿರುವ ಕೊರೋನಾದಿಂದಾಗಿ ಎಲ್ಲಾ ಕಾರ್ಯಗಳೂ ಅರ್ಥವಾಗದ ರೀತಿಯಲ್ಲಿ ಬದಲಾವಣೆಯಾಗುತ್ತಿದೆ. ಇದೀಗ ನವರಾತ್ರಿಯೂ ಅದಕ್ಕೆ ಹೊರತಾಗಿಲ್ಲ.

ಕರಿಕಾನಮ್ಮನ ದರ್ಶನ ಮಾತ್ರ

ಕೋವಿಡ್ ಕಾರಣ ಜಿಲ್ಲೆಯ ಪ್ರಸಿದ್ಧ ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭದಲ್ಲಿ ಯಾವುದೇ ವಿಶೇಷ ಸೇವೆ ನಡೆಸುವುದಿಲ್ಲ ಭಕ್ತಾದಿಗಳು ಬಂದು ದೇವಿ ದರ್ಶನ ಪಡೆದು ಮರಳಬಹುದು.

RELATED ARTICLES  MR. South Indian 2020 ವಿಜೇತರಾದ ಕುಮಟಾದ ಸಚಿನ್.

ಉಡಿತುಂಬುವ ಅಥವಾ ಇತರೆ ಯಾವುದೇ ಕಾರ್ಯಕ್ರಮ ಇರುವುದಿಲ್ಲ ವಾರ್ಷಿಕ ಸೇವೆ ಮಾಡುವವರಿಗೆ ಅಂಚೆಯಲ್ಲಿ ಪ್ರಸಾದ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

RELATED ARTICLES  ಭಟ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಮುಂಡಳ್ಳಿಯ ನಾರಾಯಣ ಬಡಿಯಾ ನಾಯ್ಕ.

ಪ್ರತೀ ವರ್ಷ ನವರಾತ್ರಿಯ ಪ್ರಾರಂಭದಿಂದ ಅನೇಕ ದಿನಗಳವರೆಗೆ ಇಲ್ಲಿ ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾವಿರಾರು ಭಕ್ತರು ಬಂದು ಹರಕೆ ಪೂಜೆ ಹಾಗೂ ಇತರ ಸೇವೆಗಳನ್ನು ಕೈಗೊಳ್ಳುತ್ತಿದ್ದರು. ಈ ವರ್ಷ ಕೊರೋನಾದಿಂದಾಗಿ ಈ ಎಲ್ಲಾ ಆಚರಣೆಗಳೂ ಕಡಿಮೆಯಾಗಲಿದೆ.