ಕುಮಟಾ: ’ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ತಾಲೂಕಿನ ನೆಲ್ಲಿಕೇರಿಯ ಮೂರು ವರ್ಷದ ಬಾಲಕ ಸಂಪ್ರೀತ್ ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ಸ್ಥಾನ ಪಡೆದುಕೊಂಡಿದ್ದಾನೆ.

30 ದೇಶಗಳ, 29 ರಾಜ್ಯಗಳ ರಾಜಧಾನಿಗಳ ಹೆಸರು ಹೇಳುತ್ತಾನೆ, ನಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಾನೆ. ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆಗಳನ್ನು ಓದಲು, ಬರೆಯುವುದು ಕಲಿತಿದ್ದಾನೆ. ಹಿಂದಿ ಅಕ್ಷರಗಳನ್ನು ಓದಲು ಕಲಿತಿದ್ದಾನೆ. ಬಣ್ಣಗಳ ಹೆಸರು, ಪ್ರಾಣಿ, ಪಕ್ಷಿ, ಹೂಗಳು, ವಾಹನಗಳ ಬಗ್ಗೆ ಕನಿಷ್ಠವೆಂದರೂ ತಲಾ 25 ಹೆಸರುಗಳನ್ನು ಹೇಳುತ್ತಾನೆ.

RELATED ARTICLES  ಹಿಂದೂ ಮೀನುಗಾರ ಸಮಾಜದವರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಒಂದರಿಂದ 100 ರತನಕ ಸರಾಗವಾಗಿ ಹೇಳುತ್ತಾನೆ. ಜ್ಞಾನಪೀಠ ಪುರಸ್ಕೃತರ ಹೆಸರು, ಕವಿಗಳ ಬಿರುದು, ಕರೆನ್ಸಿ, ಕನ್ನಡದ 100ಕ್ಕೂ ಅಧಿಕ ಶಬ್ದಗಳನ್ನು ಇಂಗ್ಲಿಷ್‌ನಲ್ಲಿ ಉಚ್ಚರಿಸಲು ಕಲಿತಿದ್ದಾನೆ. ಮಾನವ ಶರೀರದ ಭಾಗಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹೇಳುತ್ತಾನೆ. 118 ಪರಮಾಣು ಲೆಕ್ಕಗಳ ಪೈಕಿ 30ನ್ನು ತಿಳಿದಿದ್ದಾನೆ.

RELATED ARTICLES  ಆಸ್ತಿಕ್ಯಕ್ಕೆ ಶ್ರುತ್ಯಾಧಾರ (‘ಶ್ರೀಧರಾಮೃತ ವಚನಮಾಲೆ’ಯಿಂದ)

ಈ ಪುಟ್ಟ ಬಾಲಕ ಅನಿತಾ ಸಂತೋಷ ನಾಯ್ಕ ಹಾಗೂ ಸಂತೋಷ ಕೇಶವ ನಾಯ್ಕ ಅವರ ಪುತ್ರನಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನ ಜ್ಞಾಪಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾನೆ.

ಮಕ್ಕಳ ಸ್ಮರಣಶಕ್ತಿ, ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಗುರುತಿಸುತ್ತಾರೆ ಎಂದು ಯುಟ್ಯೂಬ್‌ನಲ್ಲಿ ನೋಡಿ, ಈ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಿ, ಅವರ ವೆಬ್‌ಸೈಟ್‌ಗೆ ಅರ್ಜಿ ಸಲ್ಲಿಸಿದರು ಎನ್ನಲಾಗಿದೆ.