ಕುಮಟಾ: ತಾಲೂಕಿನ ಕೋಡಕಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೂಡನಕೇರಿ ವಾರ್ಡನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆಸಲಾದ ಗಟಾರ್ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಗುತ್ತಿಗೆದಾರರು ಹಾಗೂ ಇಂಜಿನೀಯರ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

IMG 20201016 WA0006
2018-2019 ಅವಧಿಯಲ್ಲಿ ಸುಮಾರು 50.564 ರೂ ಗಳ ಕಾಮಗಾರಿ ನಡೆಸಲಾಗಿತ್ತು. ಕಾಮಾಗಾರಿ ಮಾಡುವಾಗ ತಳ ಭಾಗದಲ್ಲಿ ಸಿಮೇಂಟ್ ಕಾಕ್ರೀಟ್ ಅಳವಡಿಸಿ ಕೆಲಸ ಮಾಡಬೇಕು ಮತ್ತು ಎರಡು ಕಡೆ ಕಲ್ಲು ಕಟ್ಟಿ ಗಟಾರ ನಿರ್ಮಾಣ ಮಾಡಬೇಕು ಎನ್ನುವ ನಿಬಂಧನೆ ಇದ್ದರೂ ಗುತ್ತಿಗೆದಾರರು ಕೇವಲ ಗಟಾರ್ ಮೇಲ್ಬಾಗದಲ್ಲಿ ಸಿಮೇಂಟ್ ಲೇಪನ ಮಾಡಿದ್ದು,ಒಂದು ಬದಿ ಮಣ್ಣಿನ ಗೋಡೆಗೆ ಗಿಲಾಯ್ ಮಾಡಿ ಮಂಜೂರಾದ ಹಣದಲ್ಲಿ ಅರ್ಧ ಹಣವನ್ನೂ ಬಳಸದೇ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಇದಕ್ಕೆ ಇಂಬು ನೀಡುವಂತೆ ಮಳೆಯ ರಭಸಕ್ಕೆ ಗುತ್ತಿಗೆದಾರರು ಕೈಗೊಂಡ ಕಾಮಗಾರಿ ಎಲ್ಲಾ ನೀರಿನಲ್ಲಿ ಕೊಚ್ಚಿಹೊಗಿದೆ. ಹೀಗಾಗಿ ಕಳಪೆ ಕಾಮಗಾರಿ ನಡೆಸಲಾದ ಗಟಾರವನ್ನು ಪುನ: ನಿರ್ಮಿಸಕೊಡಬೇಕು. ಇಲ್ಲವಾದಲ್ಲಿ ಜಿ.ಪಂ ಇಂಜಿನೀಯರಿಂಗ್ ಕಛೇರಿ ಏದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

RELATED ARTICLES  ಚಿತ್ರಿಗಿ: ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣ

ಸಾರ್ವಜನಿಕರ ಆರೋಪ ಸತ್ಯಕ್ಕೆ ದೂರವಾದದ್ದು. ಕಾಮಗಾರಿ ಸರಿಯಾಗಿ ಮಾಡಲಾಗಿದೆ. ನಿಮಗೆ ಅನುಮಾನವಿದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ನೀಡಬಹುದು.- ಪಂಚಾಯತ ಕಾರ್ಯದರ್ಶಿ ತಿರುಮಲೇಶ D

RELATED ARTICLES  ಸರಸ್ವತಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ ನವೆಂಬರ್ 24ಕ್ಕೆ