ಶಿವಮೊಗ್ಗ: ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ ಎಂದು ರೈತರು ಹಾಗೂ ಶಾಸಕಿ ಶಾರದ ಪೂರ್ಯನಾಯಕ್ ಅನಿರ್ಧಿಷ್ಠಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ತುಂಗಾ ಮೇಲ್ದಂಡೆ ಯೋಜನೆಯಿಂದ ಗೌಡನ ಕೆರೆ, ಹಾಯ್ ಹೋಳೆ ಕೆರೆ ಹಾಗೂ ಬಾರೇಹಳ್ಳಕೆರೆ ಕೆರೆಗಳಿಗೆ ನೀರನ್ನ ತುಂಬಿಸೋ ಯೋಜನೆ ಇದಾಗಿದೆ. ಈ ಯೋಜನೆಯಿಂದ ಏಳು ಸಾವಿರಕ್ಕೂ ಅಧಿಕ ಎಕರೆ ಜಮೀನಿಗೆ ನೀರಾವರಿ ಅನುಕೂಲ ಮಾಡೋ ನಿಟ್ಟಿನಲ್ಲಿ ದಶಕದ ಹಿಂದೆ ಕಾಮಗಾರಿ ಚಾಲನೆ ನೀಡಲಾಗಿತ್ತು, ಆದ್ರೆ ದಶಕ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಆಯನೂರು ಹೋಬಳಿಯ ಗ್ರಾಮದ ರೈತರು ಕಾಮಗಾರಿ ಪೂರ್ಣಗೊಳಿಸುವಂತೆ ತುಂಗಾ ಮೇಲ್ದಂಡೆ ಕಚೇರಿಯ ಮುಂಭಾಗಂ ಜುಲೈ ತಿಂಗಳಲ್ಲಿ 19 ದಿವಸಗಳ ಕಾಲ ಧರಣಿ ನಡೆಸಿದರು. ಈ ವೇಳೆ  ಜಿಲ್ಲಾ ಸಚಿವರು ಹಾಗೂ ಕಾಮಗಾರಿಯ ಇಂಜಿನಿಯರ್ ಹಾಗೂ ಗುತ್ತಿಗೆದಾರ ಆಗಸ್ಟ್ ತಿಂಗಳ ಅಂತ್ಯದೊಳಗೆ ಮುಗಿಸುವ ಭರವಸೆ ನೀಡಿದ್ದರು. ಆದರೆ ಇನ್ನು ಮುಗಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES  ಆತ್ಮಹತ್ಯೆಗೆ ಶರಣಾದ ಮಗನ ಸಾವಿನ ನೋವಿನಲ್ಲಿ ಕೊನೆಯುಸಿರೆಳೆದ ತಂದೆ : ನಡೆಯಿತು ಮನ ಕಲಕುವ ಘಟನೆ