ಶಿರಸಿ: ಅಕ್ರಮ ಗೋಮಾಂಸ ಸಾಗಾಟಕ್ಕೆ ಯತ್ನಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಕರಿಗುಂಡಿ ರಸ್ತೆಯಲ್ಲಿ ನಡೆದಿದೆ.
ಬಂಧಿತರಿಂದ ಪೊಲೀಸರು ಅಂದಾಜು 4950 ಮೌಲ್ಯದ 16 ಕೆಜಿ 460 ಗ್ರಾಂ ಗೋಮಾಂಸ, 3300 ರೂ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಲಾದ 2 ಮೊಬೈಲ್‍ಗಳು ಮತ್ತು ಅಂದಾಜು 30,000 ರೂ ಮೌಲ್ಯದ ಸ್ಲೆಂಡರ್ ಬೈಕನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕರಿಗುಂಡಿ ರಸ್ತೆಯಲ್ಲಿ ಗೋಮಾಂಸ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಅಕ್ಕಿಆಲೂರು ಮೂಲದ ಮಹ್ಮದ್ ಸಲಿಂ ಮಾಬುಸಾಬ ಬೇಪಾರಿ ಮತ್ತು ಭಾಷಾಸಾಬ ಅಬ್ದುಲ್ ಖಾದರಸಾಬ ಬಹದ್ದೂರ ಎಂಬವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಸಿಬ್ಬಂದಿಗಳಾದ ಚಿದಾನಂದ ನಾಯ್ಕ, ಹನುಮಂತ ಮಾಕಾಪುರ, ಮೋಹನ ನಾಯ್ಕ ಹಾಗೂ ಇತರರು ಭಾಗವಹಿಸಿದ್ದರು.